ಛತ್ತೀಸ್‌ಗಢದಲ್ಲಿ ಪತ್ರಕರ್ತ ಮುಖೇಶ್ ಚಂದ್ರಕರ್ ಅವರು ರಸ್ತೆ ನಿರ್ಮಾಣದಲ್ಲಿನ ಭ್ರಷ್ಟಾಚಾರವನ್ನು ಬಯಲಿಗೆಳೆದ ಕಾರಣ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
56 ಕೋಟಿ ಮೌಲ್ಯದ ರಸ್ತೆಯನ್ನು 102 ಕೋಟಿ ಎಂದು ತೋರಿಸಿ ಭ್ರಷ್ಟಾಚಾರ ಮಾಡಲಾಗಿದೆ. ಈ ಭ್ರಷ್ಟಾಚಾರದಲ್ಲಿ ಮುಖೇಶ್ ಸಂಬಂಧಿಕರೂ ಭಾಗಿಯಾಗಿದ್ದಾರೆ.
ಕೊಲೆಯಾದ ಪತ್ರಕರ್ತ, ಮುಕೇಶ್ ಚಂದ್ರಾಕರ್ ಅವರು ಆದಿವಾಸಿಗಳ ಸಮಸ್ಯೆಗಳನ್ನು ವರದಿ ಮಾಡುವ ಮೂಲಕ ಮತ್ತು ಭ್ರಷ್ಟಾಚಾರವನ್ನು ಬಯಲಿಗೆಳೆಯುವ ಮೂಲಕ ಪತ್ರಿಕೋದ್ಯಮವನ್ನು ಜೀವಂತವಾಗಿಟ್ಟಿದ್ದರು.
ಪ್ರಾಮಾಣಿಕ ಪತ್ರಕರ್ತರಾಗಿದ್ದ ಅವರನ್ನು ಕೊಡಲಿಯಿಂದ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ.
ದುರ್ದೈವ, ದೇಶ ಮೌನವಾಗಿದೆ, ನಾಯಕರು ಮೌನವಾಗಿದ್ದಾರೆ, ದೊಡ್ಡ ಪತ್ರಕರ್ತರು ಮೌನವಾಗಿದ್ದಾರೆ.