ಧಾರವಾಡಕ್ಕೆ ಮಹಾನಗರ ಪಾಲಿಕೆ ತಂದೋರು ಯಾರು ಅನ್ನೋದರ ಬಗ್ಗೆ ನಾಳೆ ಕಾಂಗ್ರೇಸ್ಸಿನವರು ” ಖರೇ ಹೇಳ್ತಾರಂತ “.
ಧಾರವಾಡಕ್ಕೆ ಮಹಾನಗರ ಪಾಲಿಕೆ ತಂದಿರುವದರ ಬಗ್ಗೆ ಕಾಂಗ್ರೇಸ್ ಹಾಗೂ ಬಿಜೆಪಿ ಎರಡು ಪಕ್ಷಗಳು ಬ್ಯಾನರ್ ಹಾಕಿ ಜನರ ಗಮನ ಸೆಳೆದಿದ್ದರು.
ಕರ್ನಾಟಕ ಫೈಲ್ಸ್ ಬ್ಯಾನರ್ ಹಾಕಿದ್ದರ ಬಗ್ಗೆ ಸುದ್ದಿ ಮಾಡಿತ್ತು. ” ಧಾರವಾಡಕ್ಕ ಪಾಲಿಕೆ ತಂದೋರು ಯಾರು ” ಖರೇ ಹೇಳ್ರಿ ಯಾರ ತಂದಿರಿ ‘ ಶೀರ್ಷಿಕೆಯಡಿ ಸುದ್ದಿ ಪ್ರಕಟ ಮಾಡಿತ್ತು. ಜನರಲ್ಲಿ ಈ ವಿಷಯ ಗೊಂದಲ ಮೂಡಿಸಿತ್ತು.
ಈ ಕಾರಣಕ್ಕಾಗಿ ನಾಳೆ ಕಾಂಗ್ರೇಸ್ ಮುಖಂಡರು ಧಾರವಾಡದ ಸರ್ಕಿಟ್ ಹೌಸ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಲಿದ್ದು, ” ಪಾಲಿಕೆ ತಂದವರು ಯಾರು ” ಅಂತ ಇವರು ನಾಳೆ ” ಖರೇ ಹೇಳ್ತಾರಂತ “