ಸಂವಿದಾನ ಶಿಲ್ಪಿ ಡಾ!! ಬಿ ಆರ್ ಅಂಬೇಡ್ಕರ ಸ್ವಾಭಿಮಾನಿ ಅಭಿಮಾನಿ, ಅನುಯಾಯಿಗಳ ಬಳಗದ ಪ ಜಾ ಪ ಪಂ, ಹಿಂದುಳಿದ ವರ್ಗ ಹಾಗು ಅಲ್ಪಸಂಖ್ಯಾತರ ಐಕ್ಯತಾ ವೇದಿಕೆ ಆಶ್ರಯದಲ್ಲಿ ಇಂದು ಕರೆದಿದ್ದ ಹುಬ್ಬಳ್ಳಿ ಧಾರವಾಡ ಬಂದ್ ಗೆ ಕಾಂಗ್ರೇಸ್ ಬೆಂಬಲ ವ್ಯಕ್ತಪಡಿಸಿತು.
ಹುಬ್ಬಳ್ಳಿಯ ಅಕ್ಷಯ ಪಾರ್ಕ ವೃತ್ತದಲ್ಲಿ ರಸ್ತೆ ತಡೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದ್ರು. ಇತ್ತೀಚಿಗೆ ಸಂಸತ ಅಧಿವೇಶನದಲ್ಲಿ ಡಾ!! ಬಿ ಆರ ಅಂಬೇಡ್ಕರ ರವರ ಕುರಿತು ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ ಶಾ ರವರ ನಡೆ ದಿಕ್ಕರಿಸಿ ಅವರನ್ನು ವಜಾಕ್ಕೆ ಅಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೇಸ್ ಮುಖಂಡರು ಭಾಗವಹಿಸಿದ್ದರು.
ಮತ್ತೊಂದೆಡೆ ಧಾರವಾಡದಲ್ಲಿಯೂ ಸಹ ಕಾಂಗ್ರೇಸ್ ಪಕ್ಷದ ಪರವಾಗಿ ಬಿದಿಗಿಳಿದ ಹೋರಾಟಗಾರರು ಗೃಹ ಸಚಿವರ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಬಂಗಾರೇಶ ಹಿರೇಮಠ, ಬಾಬಾಜಾನ ಮುಧೋಳ ರಾಜಶೇಖರ ಮೆಣಸಿನಕಾಯಿ , ಸುರೇಶ ಸವಣೂರ ಶಾಕಿರ್ ಸನದಿ, ಅನ್ವರ ಮುಧೋಳ , ಮಜಹರ್ ಖಾನ್ , ರಾಜೀವ್ ಲದ್ವಾ.
ಬಸವರಾಜ ಮೆಣಸಗಿ , ಯಲ್ಲಪ್ಪಾ ಮೇಹರವಾಡೆ , ಸೂರ್ಯಕಾಂತ ಘೋಡಕೆ , ಜೆಹಾವಿಯರ್ ಆಂಟೋನಿ, ಪ್ರಕಾಶ ಶೆಟ್ಟಿ ಉಣಕಲ್, ಬಿ ಎ ಮುಧೋಳ ಪೀರಸಾಬ ನದಾಫ ಚಿದಾನಂದ ಸೌದತ್ತಿ ಸೇರಿದಂತೆ ಅನೇಕರು ಹುಬ್ಬಳ್ಳಿಯಲ್ಲಿ ಪ್ರತಿಭಟನೆ ಮಾಡಿದರು.
ಇತ್ತ ಧಾರವಾಡದಲ್ಲಿ ಕಾಂಗ್ರೇಸ್ ಮುಖಂಡರಾದ ರಾಬರ್ಟ್ ದದ್ದಾಪುರಿ, ಆನಂದ ಜಾದವ, ಸಲೀಮ್ ಕರಡಿಗುಡ್ಡ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದರು.