ಜನರಿಂದ ನಿತ್ಯ ಉಗಿಸಿಕೊಳ್ಳುತ್ತಿರುವ ರಾಜ್ಯದ ಏಕೈಕ ಯೋಜನೆಯಾಗಿರುವ ಹುಬ್ಬಳ್ಳಿ ಧಾರವಾಡ ನಡುವೆ ಸಂಪರ್ಕ ಕಲ್ಪಿಸುವ BRTS ಯೋಜನೆಗೆ ಕೋಟ್ಯಾಂತರ ರೂಪಾಯಿ ಹಣ ಅನ್ಯ ಮಾರ್ಗದಲ್ಲಿ ಶೇಖರಣೆಯಾಗುತ್ತಿದೆ.
ನರೇಂದ್ರ ಗ್ರಾಮಕ್ಕೂ, BRTS ಯೋಜನೆಗೂ ಏನು ಸಂಬಂಧ
ಈಗಾಗಲೇ ಹಳ್ಳ ಹಿಡಿದಿರುವ BRTS ಯೋಜನೆ ಅವೈಜ್ಞಾನಿಕ ರಸ್ತೆಯಿಂದಾಗಿ ನಿತ್ಯ ಸುದ್ದಿಯಲ್ಲಿದೆ. ಇದೀಗ ಮತ್ತೊಂದು ಬೆಚ್ಚಿ ಬೀಳಿಸುವ ಸುದ್ದಿ ಕರ್ನಾಟಕ ಫೈಲ್ಸ್ ಗೆ ಲಭ್ಯವಾಗಿದೆ.
ನರೇಂದ್ರ ಗ್ರಾಮದ ಸರಹದ್ದಿನಲ್ಲಿ ಜಮೀನುಗಳು ಬಿನ್ ಶೇತಕಿ ಯಾಗಬೇಕಾದರೆ ಪ್ರತಿ ಎಕರೆಗೆ 30 ಸಾವಿರ ರೂಪಾಯಿ ವಸೂಲಿ ಮಾಡಲಾಗುತ್ತಿದೆ.
ಹುಬ್ಬಳ್ಳಿಯ ರೇಲ್ವೆ ನಿಲ್ದಾಣದಿಂದ ಧಾರವಾಡದ ಹೊಸ ಬಸ್ ನಿಲ್ದಾಣದವರೆಗೆ ಮಾತ್ರ ಓಡಾಡುವ BRTS ಬಸ್ಸುಗಳು ನರೇಂದ್ರ ವ್ಯಾಪ್ತಿವರೆಗೆ ಬರದೇ ಇದ್ದರು, ಹಣ ಕಟ್ಟಬೇಕಾಗಿದೆ.
ಈ ಕಾಯ್ದೆ ಮಾಡಿದವರು ಯಾರು, ಹಣ ಕಟ್ಟಿಸಿಕೊಳ್ಳುವವರು ಯಾರು ಅನ್ನೋದನ್ನ ಕರ್ನಾಟಕ ಫೈಲ್ಸ್, ಧಾಖಲೆ ಸಮೇತ ಮುಂದಿನ ಸುದ್ದಿಯಲ್ಲಿ ಪ್ರಕಟ ಮಾಡಲಿದೆ.