ದೇಶದಲ್ಲಿ ಸುದ್ದಿ ಮಾಡಿದ್ದ, ಹಿರಿಯ ಸಂಶೋಧಕ ಎಂ ಎಂ ಕಲಬುರ್ಗಿ ಅವರ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಧಾರವಾಡ ಜಿಲ್ಲಾ ನ್ಯಾಯಾಲಯವು ಈಚೆಗೆ ಜಾಮೀನು ಮಂಜೂರು ಮಾಡಿದೆ.
ಈಗಾಗಲೇ ಮೂವರು ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿರುವುದರಿಂದ ಪ್ರಕರಣದಲ್ಲಿ ಎಲ್ಲಾ ಆರೋಪಿಗಳಿಗೂ ಜಾಮೀನು ದೊರೆತಂತಾಗಿದೆ.
ಧಾರವಾಡದ ಕಲ್ಯಾಣ ನಗರದಲ್ಲಿ 2015 ರ ಆಗಸ್ಟ್ 30 ರಂದು ಬೆಳಿಗ್ಗೆ ಎಂ ಎಮ್ ಕಲಬುರ್ಗಿಯವರನ್ನು ಹತ್ಯೆ ಮಾಡಲಾಗಿತ್ತು. ಶರದ ಕಾಲಸ್ಕರ ಎಂಬಾತನ ಬೈಕಿನಲ್ಲಿ ಬಂದಿದ್ದ ಗಣೇಶ ಮಿಸ್ಕಿನ್ ಎಂಬಾತ ಗುಂಡು ಹಾರಿಸಿ ಪರಾರಿಯಾಗಿದ್ದ ಎಂದು ಆರೋಪಿಸಲಾಗಿತ್ತು.
ಧಾರವಾಡ ಜಿಲ್ಲಾ ನ್ಯಾಯಾಲಯದಿಂದ ಅಮುಲ್ ಕಾಳೆ, ಗಣೇಶ ಮಿಸ್ಕಿನ್ ಮತ್ತು ಶರದ ಕಾಲಸ್ಕರ ಎಂಬ ಮೂವರು ಆರೋಪಿಗಳಿಗೆ ಜಾಮೀನು ಸಿಕ್ಕಿದೆ.
ಈಗಾಗಲೇ ಹೈಕೋರ್ಟ್ ನಿಂದ ಆರೋಪಿಗಳಾದ ಪ್ರವೀಣ, ವಾಸುದೇವ ಸೂರ್ಯವಂಶಿ ಹಾಗೂ ಅಮಿತ್ ಬದ್ದಿ ಜಾಮೀನು ಪಡೆದುಕೊಂಡಿದ್ದಾರೆ.