ಕರ್ನಾಟಕದ ಮಾನವೀಯ ಮೌಲ್ಯಯುಳ್ಳ ರಾಜಕಾರಣಿ, ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿಯವರು ಇಂದು ಬೆಂಗಳೂರಿನಲ್ಲಿ ವಿಕಲಚೇತನರ ಜೊತೆ ಸಂಕ್ರಾಂತಿ ಹಬ್ಬ ಆಚರಿಸಿದರು.
ರಾಜ್ಯ ಸರಕಾರದ ಬೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 600ಕ್ಕೂ ಹೆಚ್ಚು ವಿಕಲಚೇತನ ಉದ್ಯೋಗಿಗಳು ಕುಮಾರಸ್ವಾಮಿಯವರ ನಿವಾಸಕ್ಕೆ ಆಗಮಿಸಿ ಸಂಕ್ರಾಂತಿ ಹಬ್ಬ ಆಚರಿಸಿದರು.
2019 ರಿಂದಲೂ ವಿಕಲಚೇತನರು, ಪ್ರತೀ ವರ್ಷ ತಪ್ಪದೇ ನನ್ನೊಂದಿಗೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡು ಬರುತ್ತಿದ್ದಾರೆ. ಇವರೆಲ್ಲರೂ ನನ್ನ ಮೇಲೆ ಇಟ್ಟಿರುವ ಅಪರಿಮಿತ ಪ್ರೀತಿ, ವಾತ್ಸಲ್ಯಕ್ಕೆ ಆಭಾರಿ ಆಗಿದ್ದೇನೆ ಎಂದು ಕುಮಾರಸ್ವಾಮಿ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
2006 ರಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಎಸ್ಎಸ್ಎಲ್ಸಿ ಪಾಸಾಗಿದ್ದ 300 ಮತ್ತು ಪದವೀಧರರಾಗಿದ್ದ 300 ವಿಕಲಚೇತನರಿಗೆ ಇಂಧನ ಇಲಾಖೆಯಲ್ಲಿ ಉದ್ಯೋಗವಕಾಶ ಕಲ್ಪಿಸಿ ನೇಮಕಾತಿ ಆದೇಶ ನೀಡಿದ್ದರು. ಆ ನಂತರ ಅವರ ಸೇವೆ ಕಾಯಂ ಆಗಿರಲಿಲ್ಲ.
ಎರಡನೇ ಬಾರಿಗೆ ಸಿಎಂ ಅದ ಮೇಲೆ 2019 ರ ಸಂಕ್ರಾಂತಿ ಹಬ್ಬದ ದಿನವೇ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 600 ವಿಕಲಚೇತನರ ಸೇವೆಯನ್ನು ಕಾಯಂ ಮಾಡಿ ಆದೇಶ ಹೊರಡಿಸಿದ್ದೆ. ಅಂದಿನಿಂದ ಇವರೆಲ್ಲರೂ ಪ್ರತೀ ವರ್ಷ ಕುಟುಂಬ ಸಮೇತ ಬಂದು ನನ್ನೊಂದಿಗೆ ಸಂಕ್ರಾಂತಿ ಹಬ್ಬ ಆಚರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.