ಮುಂಬೈನ ಬಾಂದ್ರಾದಲ್ಲಿರುವ ಬಾಲಿವುಡ್ ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ ದರೋಡೆಕೋರರ ತಂಡ ಸೈಫ್ ಅಲಿ ಖಾನ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ.
ಮಧ್ಯರಾತ್ರಿ 2-30 ರ ಸುಮಾರಿಗೆ ಸೈಫ್ ಅಲಿ ಖಾನ್ ಮನೆಗೆ ದರೋಡೆಕೋರರು ನುಗ್ಗಿದ್ದಾರೆ. ದರೋಡೆಕೋರರು ಮನೆಗೆ ನುಗ್ಗುತ್ತಿದ್ದಂತೆ ಎಚ್ಚರಗೊಂಡ ಸೈಫ್ ಅಲಿ ಖಾನ್ ಮತ್ತವರ ಕುಟುಂಬಸ್ಥರು, ದರೋಡೆ ಯತ್ನ ವಿಫಲಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರ ನಡುವೆ ಕೈ ಕೈ ಮಿಲಾಯಿಸಿದ ಪಾರಿಣಾಮ ಸೈಫ್ ಅಲಿ ಖಾನ್ ಗಾಯಗೊಂಡಿದ್ದಾರೆ.
ಘಟನೆಯಲ್ಲಿ ಸೈಫ್ ಅಲಿ ಖಾನ್ ಅವರಿಗೆ 6 ಕಡೆಗೆ ಚೂರಿಯಿಂದ ಇರಿಯಲಾಗಿದ್ದು, ಅವರನ್ನು ಮುಂಬೈನ ಲೀಲಾವತಿ ಆಸ್ಪತ್ರೆಗೆ ಧಾಖಲು ಮಾಡಲಾಗಿದೆ.