ಧಾರವಾಡದ ಮಾನಸಿಕ ಆರೋಗ್ಯ ಆಸ್ಪತ್ರೆಯಲ್ಲಿ ನರವಿಜ್ಞಾನ ( ನ್ಯೂರೋಲಜಿ ) ಹಾಗೂ ನರ ಶಸ್ತ್ರಚಿಕಿತ್ಸೆ ( ನ್ಯೂರೋ ಸರ್ಜರಿ ) ವಿಭಾಗ ಆರಂಭಕ್ಕೆ ಸಿದ್ದರಾಮಯ್ಯನವರ ನೇತೃತ್ವದ ಕ್ಯಾಬಿನೆಟ್ ಅನುಮೋದನೆ ನೀಡಿದೆ.
ನೂರು ಹಾಸಿಗೆ ಸಾಮರ್ಥ್ಯದ ನ್ಯೂರೋಲಜಿ ಹಾಗೂ ನ್ಯೂರೋ ಸರ್ಜರಿ ವಿಭಾಗದ ಕಟ್ಟಡ ನಿರ್ಮಿಸಲು 33.07 ಕೋಟಿ ವೆಚ್ಚದ ಕಾಮಗಾರಿಗೆ ಅನುಮೋದನೆ ನೀಡಿದೆ.
ಇದರಿಂದಾಗಿ ಉತ್ತರ ಕರ್ನಾಟಕದ ಜನರಿಗೆ ಅತೀ ದೊಡ್ಡ ಕೊಡುಗೆ ನೀಡಿದ ಹೆಗ್ಗಳಿಕೆಗೆ ಸಿದ್ದರಾಮಯ್ಯನವರ ಸರ್ಕಾರ ಪಾತ್ರವಾಗಿದೆ.
ಧಾರವಾಡದ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಆಸ್ಪತ್ರೆ ಈಗ ಮತ್ತಷ್ಟು ಸುಸಜ್ಜಿತ ಆಸ್ಪತ್ರೆಯಾಗಲಿದ್ದು, ಲಕ್ಷಾಂತರ ರೂಪಾಯಿ ವೆಚ್ಚದ ಚಿಕಿತ್ಸೆ ಕೈಗೆಟಕುವ ಬೆಲೆಯಲ್ಲಿ ಸಿಗಲಿದೆ.