ರಾಜ್ಯದ ವಿವಿದೆಡೆ ಸರ್ಕಾರ ಉತ್ಸವ ಆಚರಿಸುತ್ತಿದ್ದು, ಈ ಸಲ ರಾಜ್ಯ ಸರ್ಕಾರ ಧಾರವಾಡ ಉತ್ಸವ ನಡೆಸಲು ನಿರ್ಧಾರ ಮಾಡಿದೆ.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಮೊದಲ ಹಂತದ ಸಭೆ ನಡೆಸಿದ್ದು, ಈ ಸಲ ಧಾರವಾಡ ಉತ್ಸವ ಮಾಡೋಣ ಎಂದು ಜಿಲ್ಲಾಧಿಕಾರಿಗಳಿಗೆ ಮೌಖಿಕವಾಗಿ ಹೇಳಿದ್ದಾರೆ.
ಸರ್ಕಾರದಿಂದ ಧಾರವಾಡ ಜಿಲ್ಲಾ ಉತ್ಸವಕ್ಕೆ ಕನಿಷ್ಟ ಮೂರು ಕೋಟಿ ಅನುದಾನ ನೀಡಬೇಕೆಂದು ಲಾಡ್ ಅವರು ಮುಖ್ಯಮಂತ್ರಿಗಳ ಕಡೆಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.