ಬೀದರನಲ್ಲಿ ATM ಹಣ ದರೋಡೆ ಮತ್ತು ಮಂಗಳೂರಿನ ಉಳ್ಳಾಲದಲ್ಲಿ ಬ್ಯಾಂಕ್ ದರೋಡೆ ಪ್ರಕರಣದ ಹಿನ್ನೆಲೆಯಲ್ಲಿ ಧಾರವಾಡದಲ್ಲಿಂದು ಪೊಲೀಸ್ ಅಧಿಕಾರಿಗಳು ಬ್ಯಾಂಕಗಳ ಸಿಬ್ಬಂದಿಗಳ ಜೊತೆ ಸಭೆ ನಡೆಸಿದರು.
ಧಾರವಾಡ ACP ಪ್ರಶಾಂತ ಸಿದ್ದನಗೌಡರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಳ್ಳಬೇಕಾದ ಸುರಕ್ಷತೆ ಹಾಗೂ ಅಗತ್ಯ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ATM ಗಳಿಗೆ ಹಣ ಸಾಗಿಸುವ ಏಜನ್ಸಿ, ಬ್ಯಾಂಕ್ ಸಿಬ್ಬಂದಿ, ಸೆಕ್ಯೂರಿಟಿ ಗಾರ್ಡ್ ಒಳಗೊಂಡು ಪ್ರತಿಯೊಬ್ಬರು ಎಚ್ಚರವಹಿಸಬೇಕು ಎಂದರು.
ಬ್ಯಾಂಕ್ ಒಳಗಡೆ ಮತ್ತು ಬ್ಯಾಂಕ್ ಆವರಣ ಹಾಗೂ ATM ಗಳಲ್ಲಿ ಕಡ್ಡಾಯವಾಗಿ ಸಿ ಸಿ ಕ್ಯಾಮರಾಗಳನ್ನು ಅಳವಡಿಸುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ವಿದ್ಯಾಗಿರಿ ಠಾಣೆಯ ಇನ್ಸಪೆಕ್ಟರ್ ಸಂಗಮೇಶ ದಿಡಿಗನಾಳ, ಉಪನಗರ ಠಾಣೆಯ ಇನ್ಸಪೆಕ್ಟರ್ ದಯಾನಂದ ಶೇಗುಣಸಿ, ಶಹರ ಠಾಣೆಯ ಇನ್ಸಪೆಕ್ಟರ್ ನಾಗೇಶ ಕಾಡದೇವರಮಠ ಉಪಸ್ಥಿತರಿದ್ದರು.
ವರದಿ – ಜೆ ಕೆ