ಸಾಲದ ವಿಚಾರವಾಗಿ ಬ್ಯಾಂಕ್ ಅಧಿಕಾರಿಗಳ ಕಿರುಕುಳ ತಾಳಲಾರದೆ ರೈತರೊಬ್ಬರು ಬ್ಯಾಂಕ್ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಲಂಗಾಣದ ಆದಿಲಾಬಾದನಲ್ಲಿ ನಡೆದಿದೆ.
ಬೇಲಾ ಮಂಡಲದ ಸೈದುಪುರ ಗ್ರಾಮದ 48 ವಯಸ್ಸಿನ ರೈತ, ಜಾದವ್ ನಾಗೋರಾವ್ ಎಂಬುವವರು ಐಸಿಐಸಿಐ ಬ್ಯಾಂಕನಲ್ಲಿ ವ್ಯವಸಾಯಕ್ಕೆ 3 ಲಕ್ಷ 50 ಸಾವಿರ ರೂಪಾಯಿ ಸಾಲ ಮಾಡಿದ್ದರು.
ಇದರಿಂದಾಗಿ ಬ್ಯಾಂಕ ಅಧಿಕಾರಿಗಳು ನಿತ್ಯ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಬ್ಯಾಂಕನವರ ಕಿರಿಕಿರಿ ತಾಳಲಾರದೆ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.