ನಾಡಿನ ಹೆಸರಾಂತ ವಿಶ್ವ ವಿದ್ಯಾಲಯಗಳಲ್ಲಿ ಒಂದಾದ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ ಕುಲಪತಿ ಹುದ್ದೆಗೆ ನೇಮಕ ಮಾಡಲು ಸರ್ಕಾರ ಆಸಕ್ತಿ ತೋರುತ್ತಿಲ್ಲ.
ಕೆ ಬಿ ಗುಡಸಿ ಅವರ ಅಧಿಕಾರದ ಅವಧಿ ಮುಗಿದ ಬಳಿಕ ಸರ್ಕಾರ ಬೇರೊಬ್ಬ ಕುಲಪತಿಯನ್ನು ನೇಮಿಸಬೇಕಿತ್ತು. ಆದರೆ ಗುಡಸಿ ಅವರ ಅವಧಿ ಮುಗಿದು 6 ತಿಂಗಳು ಗತಿಸಿದರು ಇನ್ನು ನೇಮಕ ಮಾಡಿದರೆ ಯಾಕೆ ವಿಳಂಬವಾಗುತ್ತಿದೆ ಎಂದು ಗೊತ್ತಾಗುತ್ತಿಲ್ಲ.
ಪ್ರಭಾರಿ ಕುಲಪತಿಯಾಗಿ ಸಮಾಜಶಾಸ್ತ್ರದ ಜಯಶ್ರೀ ಅವರು ಸಧ್ಯ ಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕುಲಪತಿ ನೇಮಕಕ್ಕೆ ಅರ್ಹರನ್ನು ಹುಡುಕುವ ಸರ್ಚ್ ಸಮಿತಿಗೆ ತಳವಾರ ಎಂಬ ಹೆಸರಿನ ಸಿಂಡಿಕೇಟ ಸಭೆ ಅನುಮೋದಿಸಿ, ಸರ್ಕಾರಕ್ಕೆ ಕಳಿಸಿದೆ. ಸರ್ಚ್ ಕಮೀಟಿಯಲ್ಲಿ ಉನ್ನತ ಶಿಕ್ಷಣ ಅಧಿಕಾರಿಗಳು ಸೇರಿದಂತೆ ಮೂವರು ಸರ್ಚ್ ಸಮಿತಿಯಲ್ಲಿ ಇರುತ್ತಾರೆ.
ಕುಲಪತಿ ನೇಮಕಕ್ಕೆ ಸರ್ಕಾರ ಅಧಿಸೂಚನೆ ಹೊರಡಿಸಿದ ಮೇಲೆ ಕುಲಪತಿ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗುತ್ತದೆ. ನೇಮಕವಾದ ಕುಲಪತಿಗಳ ಅವಧಿ ನಾಲ್ಕು ವರ್ಷಗಳಿಗೆ ಸೀಮಿತಗೊಳಿಸಲಾಗುತ್ತದೆ.
ಕುಲಪತಿ ಹುದ್ದೆಗೆ ಅರ್ಹತೆ
ಕುಲಪತಿ ಹುದ್ದೆಗೆ ನೇಮಕವಾಗಬೇಕಾದರೆ, 10 ವರ್ಷ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಬೇಕು. ರಾಜ್ಯ ರಾಷ್ಟ್ರ ಮತ್ತು ಮಟ್ಟದಲ್ಲಿ ಭೋಧನಾ ಪಾಂಡಿತ್ಯ ಹಾಗೂ ಸಂಶೋಧನೆಗಳನ್ನು ಮಾಡಿರಬೇಕು. ಅಂತಹವರನ್ನು ಗುರುತಿಸಿ, ಅವರು ಅರ್ಹರಿದ್ದಲ್ಲಿ ಅವರನ್ನು ಕುಲಪತಿಯನ್ನಾಗಿ ನೇಮಿಸಲಾಗಿದೆ.
ಕರ್ನಾಟಕ ವಿಶ್ವ ವಿದ್ಯಾಲಯ ತನ್ನ ಇತಿಹಾಸದಲ್ಲಿ ಅತೀ ದೊಡ್ಡ ವಿದ್ವತ್ ಪೂರ್ಣ ವ್ಯಕ್ತಿಗಳನ್ನು ನಾಡಿಗೆ ಪರಿಚಯಿಸಿದ್ದು, ಸರ್ಕಾರ ಕುಲಪತಿ ನೇಮಕದ ಬಗ್ಗೆ ಆಸಕ್ತಿ ತೋರದಿರುವುದು ವಿಪರ್ಯಾಸ.
ಜಿಲ್ಲೆಗೊಂದು ವಿಶ್ವವಿದ್ಯಾಲಯ ಪ್ರಾರಂಭವಾಗಿತ್ತು, ಕರ್ನಾಟಕ ವಿಶ್ವ ವಿದ್ಯಾಲಯ ತನ್ನದೇ ಆದ ಘನತೆಯನ್ನು ಹೊಂದಿದೆ. ನೋವಿನ ಸಂಗತಿ ಎಂದರೆ, ಇತ್ತೀಚಿಗೆ ಕ ವಿ ವಿಯಲ್ಲಿ ಜಾತಿ ರಾಜಕೀಯ ಮನೆ ಮಾಡಿದೆ.
ವರದಿ – ಮುಸ್ತಫಾ ಕುನ್ನಿಭಾವಿ