ಧಾರವಾಡ ಪ್ರತೈಕ ಪಾಲಿಕೆ ಎಂದು ಘೋಷಿಸಿದ ಬಳಿಕ ಇದೀಗ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976 ರ ಸೆಕ್ಷನ್ 3 ಮತ್ತು 4 ರ ಅನ್ವಯ ಪ್ರದತ್ತವಾದ ಅಧಿಕಾರ ಚಲಾಯಿಸಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಟಿ ಮಂಜುನಾಥ ಗೆಜೆಟ್ ಅಧಿಸೂಚನೆ ಹೊರಡಿಸಿದ್ದಾರೆ.
ಧಾರವಾಡ ಜಿಲ್ಲೆಯ ಹಾಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಪ್ರದೇಶವನ್ನು ವಿಭಜಿಸಿ, ಈ ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟ ಮಾಡಿದ್ದಾರೆ.
ಇಂದಿನಿಂದ ಜಾರಿಗೆ ಬರುವಂತೆ ಶೇಡ್ಯೂಲ್ ಬಿ (1) ರಲ್ಲಿ ನಿರ್ದಿಷ್ಟಪಡಿಸಲಾದ ಪರಿಮಿತಿಯುಳ್ಳ ಶೇಡ್ಯೂಲ್ ಎ ( 1 ) ರಲ್ಲಿನ ಪ್ರದೇಶವನ್ನು ಆಡಳಿತಾತ್ಮಕ ಹಿತದೃಷ್ಟಿಯಿಂದ ಪ್ರತ್ತೈಕಿಸಿ ದೊಡ್ಡ ನಗರ ಎಂದು ಘೋಷಿಸಿ ಧಾರವಾಡ ನಗರವನ್ನು ಧಾರವಾಡ ಮಹಾನಗರ ಪಾಲಿಕೆ ಎಂದು ಪದನಾಮಕರಿಸಿದ್ದಾರೆ.
ಕಮಲಾಪುರದಿಂದ ರಾಯಾಪುರ ಲಾಸ್ಟ್. ನವನಗರ ಹುಬ್ಬಳ್ಳಿ ಪಾಲು
ಹೊಸದಾಗಿ ಇಂದಿನಿಂದ ಅಧಿಕೃತವಾಗಿ ಜಾರಿಗೆ ಬಂದಿರುವ ಧಾರವಾಡ ಮಹಾನಗರ ಪಾಲಿಕೆಯ ಹದ್ದನ್ನು ಗುರುತಿಸಲಾಗಿದ್ದು, ಧಾರವಾಡ ಮಹಾನಗರ ಪಾಲಿಕೆ ಕಮಲಾಪುರದಿಂದ ಪ್ರಾರಂಭವಾಗಿ ರಾಯಾಪುರದಲ್ಲಿ ತನ್ನ ಸರಹದ್ದು ಕೊನೆಗೊಳಿಸಲಿದೆ. ನವನಗರ ಹುಬ್ಬಳ್ಳಿ ಮಹಾನಗರ ಪಾಲಿಕೆಯಲ್ಲಿ ಮುಂದುವರೆಯಲಿದೆ.
ಧಾರವಾಡ ಮಹಾನಗರ ಪಾಲಿಕೆ 26 ವಾರ್ಡಗಳ ವ್ಯಾಪ್ತಿ ಹೊಂದಿದ್ದು, ಇಂದಿನಿಂದ ಧಾರವಾಡ ಮಹಾನಗರ ಪಾಲಿಕೆ ಅಧಿಕೃತವಾಗಿ ಜಾರಿಗೆ ಬಂದಿದೆ.
