ಗುಜರಾತ್‌ನಲ್ಲಿ ಕುಟುಂಬವೊಂದು ತಮ್ಮ ಪ್ರೀತಿಯ 12 ವರ್ಷದ ಕಾರನ್ನು ಗುಜರಿಗೆ ಹಾಕುವ ಬದಲು, ಪೂರ್ಣ ಪ್ರಮಾಣದ ಸಮಾಧಿ ಮಾಡಿರುವ ಘಟನೆ ಇದೀಗ ವೈರಲ್ ಆಗಿದೆ.
12 ವರ್ಷಗಳ ಕಾಲ ಓಡಾಡಿದ್ದ ಕಾರಿಗೆ, ಕಾರಿನ ಮಾಲೀಕರು ಭಾವಪೂರ್ಣ ವಿದಾಯ ಹೇಳಿದ್ದಾರೆ. ಈ ಘಟನೆಯ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಗುಜರಾತ್ ಕುಟುಂಬವೊಂದು 12 ವರ್ಷದ ಕಾರಿಗೆ ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಿದೆ. ಅಮ್ರೇಲಿ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದ ಗಮನ ಸೆಳೆದಿದೆ.
ಕಾರಿನ ಮಾಲೀಕ ಸಂಜಯ್ ಪಲ್ಲೋರ ಕುಟುಂಬ, ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಪೂರ್ಣ ಪ್ರಮಾಣದ ಸಮಾಧಿ ಕಾರ್ಯ ಮಾಡುವದರೊಂದಿಗೆ ಜೀವನದ ಏಳ್ಗೆಗೆ ಕಾರಣವಾಗಿದ್ದ ಕಾರನ್ನು ನೆನಪಿಸಿಕೊಂಡರು.
ಸಮಾಧಿ ಮಾಡುವ ಸಂದರ್ಭದಲ್ಲಿ, ಕಾರಿಗೆ ಹೂಮಾಲೆಗಳಿಂದ ಅಲಂಕರಿಸಲಾಗಿತ್ತು. ಕುಟುಂಬಸ್ಥರ ಸಮ್ಮುಖದಲ್ಲಿ ಕಾರನ್ನು, ನಿಧಾನವಾಗಿ 15 ಅಡಿ ಆಳದ ಹೊಂಡಕ್ಕೆ ತಳ್ಳಲಾಯಿತು.
ಸೂರತ್‌ನಲ್ಲಿ ನಿರ್ಮಾಣ ವ್ಯವಹಾರ ನಡೆಸುತ್ತಿರುವ ಪಲೋರಾ, ತಮ್ಮ ಕುಟುಂಬದ ಯಶಸ್ಸಿನಲ್ಲಿ ಕಾರು ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದ್ದಾರೆ.
ಕುಟುಂಬದ ಯಶಸ್ಸಿನ ಪಾಲುದಾರ ಆಗಿದ್ದ, ಕಾರನ್ನು ಮಾರಾಟ ಮಾಡುವ ಬದಲು, ಅದು ನಮಗೆ ತಂದ ಅದೃಷ್ಟಕ್ಕೆ ಗೌರವವಾಗಿ ‘ಸಮಾಧಿ’ ಮಾಡಲು, ಮಾಲೀಕ ಪಲೋರಾ ನಿರ್ಧರಿಸಿದ್ದರು.
ಕಾರನ್ನು ಹಸಿರು ಬಟ್ಟೆಯಿಂದ ಹೊದಿಸಿದ ನಂತರ, ಸಾಂಪ್ರದಾಯಿಕ ಪೂಜೆ ಮಾಡಿದ ಪುರೋಹಿತರು ಮಂತ್ರಗಳನ್ನು ಪಠಿಸುತ್ತಿದ್ದಂತೆ ಗುಲಾಬಿ ದಳಗಳಿಂದ ಧಾರೆ ಎರೆಯಲಾಯಿತು. ಕಾರಿನ ಸುತ್ತ ಗಾರ್ಬಾ ಪ್ರದರ್ಶನ ನಡೆಯಿತು.
ಕುಟುಂಬದ ನೆಮ್ಮದಿ ಹಾಗೂ ಯಶಸ್ಸಿಗೆ ಕಾರಣವಾಗಿದ್ದ ಕಾರನ್ನು ನಗುನಗುತ್ತಾ ಸಮಾಧಿ ಮಾಡಲಾಯಿತು.
