ಕ್ಷುಲ್ಲಕ ಕಾರಣಕ್ಕೆ ಬಿಗ್ ಬಾಸ್ ಸ್ಪರ್ಧಿ ಲಾಯರ್ ಜಗದೀಶ್ ಮೇಲೆ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಕೊಡಗೇನಹಳ್ಳಿಯಲ್ಲಿ ನಡೆದಿದೆ.
ಲಾಯರ್ ಜಗದೀಶ್ ಅವರಿಗೆ ಸೇರಿದ ಕಟ್ಟಡಕ್ಕೆ ಹೋಗುವ ರಸ್ತೆಯಲ್ಲಿ ಅಣ್ಣಮ್ಮ ಕಾರ್ಯಕ್ರಮಕ್ಕಾಗಿ ಬೆಳಿಗ್ಗೆಯಿಂದಲೇ ರಸ್ತೆ ಬಂದ್ ಮಾಡಲಾಗಿತ್ತು.
ರಸ್ತೆ ಬಂದ್ ಮಾಡಿದ್ದರ ಕುರಿತು ಲಾಯರ್ ಜಗದೀಶ್ ಕೊಡಗೇನಹಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ಕೊಟ್ಟಿದ್ದರು.
ಪೊಲೀಸರು ಸ್ಥಳಕ್ಕೆ ಬರುವ ಮೊದಲೇ ಲಾಯರ್ ಜಗದೀಶ್ ಅವರಿದ್ದ ಸ್ಥಳಕ್ಕೆ ಬಂದ ರೌಡಿ ಪಟಾಲಂ, ಲಾಯರ್ ಜಗದೀಶ್ ಅವರ ಮೇಲೆ ಹಲ್ಲೆ ನಡೆಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ ಅವರ ಅಭಿಮಾನಿಗಳು ಹಲ್ಲೆ ನಡೆಸಿದ್ದಾರೆ ಅಂತ ಸುಳ್ಳು ಸುದ್ದಿ ಹಬ್ಬಿತ್ತು. ಇದರಿಂದಾಗಿ ಸ್ಪಷ್ಟಿಕರಣ ಕೊಟ್ಟ ಲಾಯರ್ ಜಗದೀಶ್, ರಸ್ತೆ ಬಂದ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ನಡೆಸಲಾಗಿದೆ ಎಂದು ಹೇಳಿದ್ದಾರೆ.