ಅವೈಜ್ಞಾನಿಕವಾಗಿ ನಿರ್ಮಾಣಗೊಂಡ ಧಾರವಾಡದ BRTS ರಸ್ತೆ ಅನೇಕ ಜೀವನಗಳನ್ನು ಅಂಗವೈಕಲ್ಯಕ್ಕೆ ದೂಡಿದರೆ, ಹಲವರ ಪ್ರಾಣ ಕಸಿದುಕೊಂಡಿದೆ.
ಧಾರವಾಡದ ಟೋಲ್ ನಾಕಾದಲ್ಲಿ ಕಳೆದ ಎರಡು ತಿಂಗಳಲ್ಲಿ ನಾಲ್ಕು ಅಪಘಾತಗಳಿಗೆ ಕಾರಣವಾಗಿದೆ.
ಟೋಲ್ ನಾಕಾ ರಸ್ತೆ ದಾಟಿ ಬರುವಷ್ಟರಲ್ಲಿ ಪಾದಚಾರಿಗಳಿಗೆ, ವಾಹನ ಸವಾರರಿಗೆ ಗುದ್ದುವ ಚಿಗರಿ ಬಸ್ಸುಗಳು ಆತಂಕ ಸೃಷ್ಟಿಸಿವೆ.
ಜನ, ಕೈಯಲ್ಲಿ ಜೀವ ಹಿಡಿದುಕೊಂಡು ರಸ್ತೆ ದಾಟಬೇಕಾಗಿದೆ. ಅತ್ಯಂತ ವೇಗವಾಗಿ ಓಡುವ ಚಿಗರಿ ಬಸ್ಸುಗಳು, ಜನರ ಮೈಮೇಲೆ ಬರುತ್ತವೆ.
ಇಂತಹ ಘಟನೆಗಳು ಮೇಲಿಂದ ಮೇಲೆ ನಡೆದರು, BRTS ಅಧಿಕಾರಿಗಳು ಯಾವದೇ ಕ್ರಮಕ್ಕೆ ಮುಂದಾಗದಿರುವದು ಆಕ್ರೋಶಕ್ಕೆ ಕಾರಣವಾಗಿದೆ.