ರಾಜ್ಯದ ಎರಡನೇ ರಾಜಕೀಯ ಶಕ್ತಿ ಕೇಂದ್ರ ಎನಿಸಿರುವ ಧಾರವಾಡ ಜಿಲ್ಲೆ, ಅನೇಕ ಘಟಾನುಘಟಿ ರಾಜಕಾರಣಿಗಳನ್ನು ರಾಜ್ಯಕ್ಕೆ ಪರಿಚಯಿಸಿದೆ.
ಮೂರು ಜನ ಮುಖ್ಯಮಂತ್ರಿಗಳನ್ನು ಕಂಡ ಧಾರವಾಡ ಜಿಲ್ಲೆ ರಾಜ್ಯ ರಾಜಕಾರಣಕ್ಕೆ ತನ್ನದೇ ಆದ ಕೊಡುಗೆ ನೀಡಿದೆ.
ಇದೀಗ ನಾಲ್ಕು ಜನ ಯುವ ನಾಯಕರು ಧಾರವಾಡ ಜಿಲ್ಲೆಯ ರಾಜಕಾರಣಕ್ಕೆ ಭವಿಷ್ಯದ ನಾಯಕರಾಗಿ ಹೊರಹೊಮ್ಮಿದ್ದಾರೆ.
ಧಾರವಾಡ ಗ್ರಾಮೀಣ ಶಾಸಕ, ಮಾಜಿ ಸಚಿವ ವಿನಯ ಕುಲಕರ್ಣಿಯವರ ಮಗಳು ವೈಶಾಲಿ ಕುಲಕರ್ಣಿ ಸಧ್ಯ ವನ್ಯಜೀವಿ ಮಂಡಳಿ ಸದಸ್ಯೆಯಾಗಿ ಗುರುತಿಸಿಕೊಂಡಿದ್ದಾರೆ. ತಂದೆಯಂತೆ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ.
ನವಲಗುಂದ ಶಾಸಕ ಎನ್ ಎಚ್ ಕೋನರೆಡ್ಡಿಯವರ ಮಗ ನವೀನ ಕೋನರೆಡ್ಡಿ, ತಂದೆಯಿಂದ ರಾಜಕೀಯ ಪಟ್ಟುಗಳನ್ನು ಕಲಿತು, ರಾಜಕೀಯ ಆಖಾಡಾಕ್ಕೆ ಧುಮುಕಿದ್ದಾರೆ.
ಇನ್ನು ಸಹಕಾರಿ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿ, ಏಶಿಯಾ ಖಂಡದಲ್ಲಿಯೇ ಅತೀ ದೊಡ್ಡ ಕ್ರಷಿ ಮಾರುಕಟ್ಟೆ ನಿರ್ಮಾಣ ಮಾಡಿದ ಹೆಗ್ಗಳಿಕೆ ಹೊಂದಿರುವ ಮಾಜಿ ಶಾಸಕ, ದಿವಂಗತ ಶಲವಡಿ ಶಂಕರಗೌಡರ ಮೊಮ್ಮಗ, ನವಲಗುಂದ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾಗಿದ್ದ ದೇಸಾಯಿಗೌಡ ಪಾಟೀಲರ ಮಗ ಗುರುಪ್ರಸಾದ ರಾಜಕೀಯಕ್ಕೆ ಧುಮುಕಿದ್ದಾರೆ. ಸದ್ಯ ಅವರು ನವಲಗುಂದ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ.
ರಾಜಕೀಯ ಹಿನ್ನೆಲೆಯಿಂದ ಬಂದಿರುವ, ವೃತ್ತಿಯಿಂದ ವಕೀಲರಾಗಿರುವ ಅರುಣ ಮಜ್ಜಗಿ ಧಾರವಾಡ ಜಿಲ್ಲೆಯ ರಾಜಕಾರಣದಲ್ಲಿ ಹೆಸರು ಮಾಡುತ್ತಿದ್ದಾರೆ.
ವರದಿ – ಮುಸ್ತಫಾ ಕುನ್ನಿಭಾವಿ