Download Our App

Follow us

Home » ಕರ್ನಾಟಕ » 3 ಕೋಟಿ ವೆಚ್ಚದ ಸಾಧನಕೇರಿ ಕೆರೆ ಕಾಮಗಾರಿಯಲ್ಲಿ ಗೋಲ್ಮಾಲ್. ವಿನಯ ಕುಲಕರ್ಣಿಯವರ ಹೆಸರಿಗೆ ಕಳಂಕ ತರಲು ಪ್ರಯತ್ನ

3 ಕೋಟಿ ವೆಚ್ಚದ ಸಾಧನಕೇರಿ ಕೆರೆ ಕಾಮಗಾರಿಯಲ್ಲಿ ಗೋಲ್ಮಾಲ್. ವಿನಯ ಕುಲಕರ್ಣಿಯವರ ಹೆಸರಿಗೆ ಕಳಂಕ ತರಲು ಪ್ರಯತ್ನ

ಜ್ಞಾನಪೀಠ ಪುರಸ್ಕೃತ ಡಾ. ದ. ರಾ. ಬೇಂದ್ರೆಯವರ ಕಾವ್ಯಕ್ಕೆ ಸ್ಫೂರ್ತಿ ನೀಡಿದ್ದ ಸಾಧನಕೇರಿ ಕೆರೆಯಲ್ಲಿ ಕಾಮಗಾರಿ ಹೆಸರಲ್ಲಿ ಅಧಿಕಾರಿಗಳು ಕೋಟ್ಯಾಂತರ ರೂಪಾಯಿ ಗೋಲ್ಮಾಲ್ ನಡೆಸಿದ್ದಾರೆ. 

ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರ ಈ ಕೆರೆ ಅಭಿವೃದ್ಧಿಗೆ 3 ಕೋಟಿ 50 ಲಕ್ಷ ರೂಪಾಯಿ ಅನುದಾನ ನೀಡಿತ್ತು. ಕೆರೆ ಅಭಿವೃದ್ಧಿ ಮಾಡಲು ಲ್ಯಾಂಡ್ ಆರ್ಮಿಗೆ ಜವಾಬ್ದಾರಿ ವಹಿಸಲಾಗಿತ್ತು. 

ಕಾಮಗಾರಿ ಆರಂಭಿಸಿದ್ದ ಕೇವಲ ಎರಡು ತಿಂಗಳ ಅವಧಿಯಲ್ಲಿಯೇ ಹುಬ್ಬಳ್ಳಿ ಧಾರವಾಡ ಮಹಾನಗರ ಅಭಿವೃದ್ಧಿ ಪ್ರಾಧಿಕಾರ ಬಳಕೆ ಪ್ರಮಾಣಪತ್ರ ಪಡೆಯದೇ ಒಂದು ಕೋಟಿ 80 ಲಕ್ಷ ಹಣವನ್ನು ಲ್ಯಾಂಡ್ ಆರ್ಮಿಗೆ ಪಾವತಿಸಿ ಪ್ರಮಾದ ಎಸಗಿದೆ.

ಕೆರೆಯ ಯಾವ ಯಾವ ಕಾಮಗಾರಿಗೆ ಎಷ್ಟು ಹಣ ಖರ್ಚು ಹಾಕಿದೆ ಅನ್ನೋದರ ಮಾಹಿತಿ ಕರ್ನಾಟಕ ಫೈಲ್ಸ್ ಗೆ ಲಭ್ಯವಾಗಿದೆ.

skenthning of existing band ಕಾಮಗಾರಿಗೆ 44 ಲಕ್ಷ 90 ಸಾವಿರ ಪೈಕಿ 17 ಲಕ್ಷ 1 ಸಾವಿರದಾ 37 ರೂಪಾಯಿ ಹಣ ಪಾವತಿಯಾಗಿದೆ. 

pevars and curb stone ಅಳವಡಿಕೆ ಕಾಮಗಾರಿಗೆ 65 ಲಕ್ಷದ ಪೈಕಿ 24 ಲಕ್ಷ 62 ಸಾವಿರದಾ 525 ರೂಪಾಯಿ ಪಾವತಿ ಮಾಡಲಾಗಿದೆ. 

ಕೆರೆಯ ಹೂಳೆತ್ತುವ ಹಾಗೂ ಫಿಡರ್ ಚಾನೆಲ್ ಸುಧಾರಣೆ ಕಾಮಗಾರಿಗೆ 45 ಲಕ್ಷ 15 ಸಾವಿರ ರೂಪಾಯಿ ಪೈಕಿ 17 ಲಕ್ಷ 10 ಸಾವಿರದಾ 507 ರೂಪಾಯಿ ಪಾವತಿ ಮಾಡಲಾಗಿದೆ.

ನೀರಿನ ಗುಣಮಟ್ಟ ಸುಧಾರಿಸುವ ಕಾಮಗಾರಿಗೆ 81 ಲಕ್ಷ 55 ಸಾವಿರ ರೂಪಾಯಿ ಪೈಕಿ 31 ಲಕ್ಷ 27 ಸಾವಿರದಾ 406 ರೂಪಾಯಿ ಪಾವತಿ ಮಾಡಲಾಗಿದೆ. 

rivamping, and upgradation of existing fountain ಕಾಮಗಾರಿಗೆ 72 ಲಕ್ಷ 27000 ಸಾವಿರ ರೂಪಾಯಿ ಪೈಕಿ  27 ಲಕ್ಷ 37 ಸಾವಿರದಾ 949 ರೂಪಾಯಿ ಪಾವತಿ ಮಾಡಲಾಗಿದೆ. 

ಮತ್ತೆ ಎರಡನೇ ಬಾರಿ existing band ಕಾಮಗಾರಿ ನೆಪ ಹೇಳಿ 44 ಲಕ್ಷ 90, 000 ಸಾವಿರ ರೂಪಾಯಿ ಪೈಕಿ 1 ಲಕ್ಷ 71 ಸಾವಿರದಾ 81 ರೂಪಾಯಿ ಪಾವತಿ ಮಾಡಲಾಗಿದೆ.

ಮತ್ತೆ ಅದೇ ಕೆಲಸಕ್ಕೆ pavers and curb stone ಅಳವಡಿಕೆ ಕಾಮಗಾರಿ ಎಂದು ಹೇಳಿ 65 ಲಕ್ಷ ರೂಪಾಯಿ ಪೈಕಿ 12 ಲಕ್ಷ 31 ಸಾವಿರದಾ 263 ರೂಪಾಯಿ ಪಾವತಿ ಮಾಡಲಾಗಿದೆ. 

ಮುಖ್ಯವಾಗಿ ಕೆರೆಯ ಹೂಳೆತ್ತುವ ಹಾಗೂ ಫಿಡರ್ ಚಾನೆಲ್ ಸುಧಾರಣೆ ಕಾಮಗಾರಿ ಎಂದು ಹೇಳಿ. 45 ಲಕ್ಷ 15000 ವೆಚ್ಚ ಮಾಡಲು ಹೊರಟಿದೆ. 

ಆದರೆ ಇಷ್ಟೆಲ್ಲಾ ಹಣ ಬಿಡುಗಡೆಯಾದರು ಸಾಧನಕೇರಿ ಕೆರೆ ಮಾತ್ರ ಮೊದಲಿನ ಸ್ಥಿತಿಯಲ್ಲಿಯೇ ಇದೆ. 

ಅದೇ ಚರಂಡಿ ನೀರು, ದುರ್ವಾಸನೆ ಬೀರುವ ಕೆರೆ, ಹಾಳಾಗಿ ಹೋದ ಆವರಣ, ಇಲ್ಲಿ ಕಂಡು ಬರುತ್ತಿದೆ. 

ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿಯವರಿಗೆ ಗೊತ್ತಿಲ್ಲದೇ ಇವೆಲ್ಲ ಕೆಲಸಗಳು ನಡೆದಿದ್ದು, ಅವರ ಹೆಸರಿಗೆ ಕಳಂಕ ತರುವ ಪ್ರಯತ್ನ ಸದ್ದಿಲ್ಲದೇ ನಡೆದಿದೆ. 

ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಅದ್ಭುತವಾಗಿ ಅಭಿವೃದ್ಧಿಗೊಳ್ಳಬೇಕಿದ್ದ ಸಾಧನಕೇರಿಯ ಕೆರೆಯನ್ನು ಲೂಟಿ ಹೊಡೆದ ಅಧಿಕಾರಿಗಳ ಮೇಲೆ ವಿನಯ ಕುಲಕರ್ಣಿಯವರು ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ.

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಧಾರವಾಡ ಪಾಲಿಕೆ ಕಮಿಷನರ್ ಈಶ್ವರ ಉಳ್ಳಾಗಡ್ಡಿ ಎತ್ತಂಗಡಿ ?

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿಯವರನ್ನು ಎತ್ತಂಗಡಿ ಮಾಡಲಾಗಿದೆಯಂತೆ. ಇಂತಹದೊಂದು ಸುದ್ದಿ ವೇಗವಾಗಿ ಹರದಾಡುತ್ತಿದ್ದು, ವರ್ಗಾವಣೆ ಖಚಿತ ಎನ್ನಲಾಗಿದೆ.  ಪಾಲಿಕೆ ಆಯುಕ್ತರಾಗಿರುವ ಈಶ್ವರ

Live Cricket

error: Content is protected !!