ಗಣಿ ನಾಡು ಬಳ್ಳಾರಿಯಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿನ ಮಕ್ಕಳ ವೈದ್ಯ ಡಾ.ಸುನೀಲ್ ರನ್ನು ಅಪಹರಣ ಮಾಡಲಾಗಿದೆ.
ಬೆಳಿಗ್ಗೆ ವಾಯುವಿಹಾರಕ್ಕೆ ಹೋದಂತ ಸಂದರ್ಭದಲ್ಲಿ ಅಪಹರಣ ಮಾಡಲಾಗಿದೆ.
ಬೆಳಿಗ್ಗೆ ಸತ್ಯನಾರಾಯಣ ಪೇಟೆಯ ಶನೇಶ್ವರ ಗುಡಿ ಬಳಿ ವಾಕಿಂಗ್ ಮಾಡುತ್ತಿದ್ದ ವೈಧ್ಯ ಸುನೀಲ್ ರನ್ನು ಮೂವರು ಅಪಹರಣಕಾರರು ಅವರನ್ನು ಕಾರಿನಲ್ಲಿ ಹಾಕಿಕೊಂಡು ಹೋಗಿದ್ದಾರೆ.
ಅಪಹರಣಕಾರರಿಂದ 6 ಕೋಟಿ ಡಿಮ್ಯಾಂಡ್
ಅಪಹರಣಕಾರರು ವೈಧ್ಯರ ಸಹೋದರನಿಗೆ ಕರೆ ಮಾಡಿ 6 ಕೋಟಿ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಕಿಡ್ನಾಪ್ ಮಾಡಿದವರು ವೈದ್ಯರ ಮೊಬೈಲ್ ನಿಂದಲೇ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಟಾಟಾ ಇಂಡಿಗೋ ಕಾರಿನಲ್ಲಿ ಬಂದಿದ್ದ ಅಪಹರಣಕಾರರು, ವೈದ್ಯ ಸುನೀಲ್ ಬಾಯಿಯನ್ನು ಮುಚ್ಚಿ ಕಾರಿನಲ್ಲಿ ಕೂಡಿಸಿಕೊಂಡು ಹೋಗಿದ್ದಾರೆ.
ವೈದ್ಯ ಸುನೀಲ್ ಅವರ ಸಹೋದರ ವೇಣು ಬಳ್ಳಾರಿ ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷರಾಗಿದ್ದಾರೆ.
ಕಿಡ್ನಾಪ್ ಗೆ ಸಹೋದರನ ವ್ಯವಹಾರ ಲಿಂಕ್ ಇದೆಯೇ ಅನ್ನೋ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು ಕಿಡ್ನಾಪರ್ ಪತ್ತೆಗೆ ಮುಂದಾಗಿದ್ದಾರೆ. ಬಳ್ಳಾರಿ ಗಾಂಧಿನಗರ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ