ಕಳೆದ 75 ವರ್ಷಗಳಿಂದ ತಮ್ಮ ಜೊತೆ ಬದುಕುತ್ತಿದ್ದ ಹಿಂದೂ ಮಹಿಳೆ ನಿಧನಗೊಂಡಾಗ, ಮುಸ್ಲಿಮ್ ಕುಟುಂಬವೊಂದು ಮುಂದೆ ನಿಂತು ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಸಿದ ಘಟನೆ ಕಾಪು ಸಮೀಪದ ಮಲ್ಲಾರು ಎಂಬಲ್ಲಿ ನಡೆದಿದೆ.
90 ವರ್ಷ ವಯಸ್ಸಿನ ಉಧ್ಯಾವರ ಮೂಲದ ಜಾನಕಿ, ತನ್ನ ಪತಿಯ ನಿಧನದ ನಂತರ ರಫೀಕ್ ಎಂಬುವವರು ಜಾನಕಿಯವರಿಗೆ ಆಶ್ರಯ ಕೊಟ್ಟಿದ್ದರು.
ಜಾನಕಿಯವರಿಗೆ ಸ್ವಂತ ಕುಟುಂಬವಿದ್ದರು ಯಾರು ಸಹ ಅವರ ಸಂಪರ್ಕ ಇಟ್ಟುಕೊಂಡಿರಲಿಲ್ಲ. ಇದ್ದ ಒಬ್ಬ ಮಗ ಸಹ ಮದುವೆಯಾಗಿ ಪತ್ನಿಯ ಜೊತೆ ಬೇರೆ ಊರಿನಲ್ಲಿ ವಾಸವಾಗಿದ್ದ.
ರಫೀಕ್ ಅವರ ಕುಟುಂಬ ವೃದ್ಯಾಪದಲ್ಲಿಯೂ ಅವರನ್ನು ತಾಯಿ ಸ್ಥಾನದಲ್ಲಿ ಜೋಪಾನ ಮಾಡಿದ್ದರು. ಜಾನಕಿ ನಿಧನದ ಸುದ್ದಿ ಅವರ ಮಗನಿಗೆ ತಿಳಿಸಿದಾಗ ಮಗ ಅಂತ್ಯಸಂಸ್ಕಾರಕ್ಕೆ ಬಂದಿದ್ದ.
ರಫೀಕ್ ಕುಟುಂಬದ ಸದಸ್ಯರು ಮುಂದೆ ನಿಂತು, ಮಗನಾ ಕಡೆಯಿಂದ ಜಾನಕಿಯವರ ಅಂತ್ಯಸಂಸ್ಕಾರವನ್ನು ಹಿಂದೂ ಧಾರ್ಮಿಕ ವಿಧಿ ವಿಧಾನದಂತೆ ಮಾಡಿ, ಕೋಮು ಸೌಹಾರ್ಧತೆ ಮೆರೆದಿದ್ದಾರೆ. ಅಲ್ಲದೇ ಮನೆಯ ಮುಂದೆ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಸಿ, ಊರಿನವರಿಗೆ ಊಟ ಹಾಕಿಸಿದ್ದಾರೆ.