ಮಹಾರಾಷ್ಟ್ರದ ರೈಲು ದುರಂತ ಮಾಸುವ ಮುನ್ನವೇ, ಪಶ್ಚಿಮ ಬಂಗಾಳದಲ್ಲಿ ಮತ್ತೊಂದು ಭೀಕರ ರೈಲು ಅಪಘಾತ ನಡೆದಿದೆ.
ಪಶ್ಚಿಮ ಬಂಗಾಲದ ಹೌರಾ ಬಳಿ ಈ ದುರ್ಘಟನೆ ನಡೆದಿದೆ. ಸಂತ್ರಗಚಿ ಮತ್ತು ಶಾಲಿಮಾರ್ ರೈಲು ನಿಲ್ದಾಣದ ನಡುವೆ ಎರಡು ರೈಲುಗಳು ಪರಸ್ಪರ ಡಿಕ್ಕಿ ಹೊಡೆದಿವೆ.
ಮಾಹಿತಿಯ ಪ್ರಕಾರ, ಸಂತ್ರಗಚ್ಚಿ-ತಿರುಪತಿ ಎಕ್ಸ್‌ಪ್ರೆಸ್ ಸಂತ್ರಗಚಿಯಿಂದ ಶಾಲಿಮಾರ್‌ಗೆ ಹೋಗುತ್ತಿದ್ದಾಗ, ಸೈಡ್ ಲೈನ್‌ನಲ್ಲಿ ಎಂಜಿನ್ ಎರಡು ಬೋಗಿಗಳನ್ನು ಎಳೆಯುತ್ತಿತ್ತು. ಆಗ ಎರಡೂ ರೈಲುಗಳು ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಇದರಿಂದಾಗಿ ರೈಲಿನ ಒಟ್ಟು ಮೂರು ಬೋಗಿಗಳು ಹಳಿ ತಪ್ಪಿವೆ.
ಅಪಘಾತದ ವೇಳೆ ಸಂತ್ರಗಚ್ಚಿ-ತಿರುಪತಿ ಎಕ್ಸ್‌ಪ್ರೆಸ್ ಖಾಲಿಯಾಗಿತ್ತು ಎಂದು ಹೇಳಲಾಗುತ್ತಿದೆ. ಈ ಘಟನೆಯಿಂದ
ರೈಲು ಸಂಚಾರಕ್ಕೆ ತೊಂದರೆಯಾಗಿದೆ. ಈ ಅಪಘಾತದ ನಂತರ ಈ ಮಾರ್ಗದಲ್ಲಿ ರೈಲುಗಳ ಸಂಚಾರಕ್ಕೆ ತೊಂದರೆಯಾಗಿದೆ. ಅಪಘಾತದ ನಂತರ, ಸಾಲಿಮಾರ್-ಸಂತ್ರಗಚ್ಚಿ ಮಾರ್ಗದಲ್ಲಿ ಅನೇಕ ರೈಲುಗಳು ಅಸ್ತವ್ಯಸ್ತಗೊಂಡಿವೆ.
ಅಪಘಾತದ ಹಿನ್ನೆಲೆಯಲ್ಲಿ ಎರಡು ರೈಲುಗಳ ಸಮಯವನ್ನು ಬದಲಾಯಿಸಲಾಗಿದೆ. ಈ ಅಪಘಾತದಲ್ಲಿ ತಿರುಪತಿ ಎಕ್ಸ್‌ಪ್ರೆಸ್‌ನ ಎರಡು ಬೋಗಿಗಳು ಮತ್ತು ಇನ್ನೊಂದು ರೈಲಿನ ಒಂದು ಕಂಪಾರ್ಟ್‌ಮೆಂಟ್ ಹಳಿತಪ್ಪಿದೆ ಎಂದು ಹೇಳಲಾಗುತ್ತಿದೆ.
ಅಪಘಾತದ ನಂತರ ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ಹಳಿಯಿಂದ ಬಿದ್ದ ಬೋಗಿಗಳನ್ನು ಹೊರತೆಗೆಯುವ ಕಾರ್ಯ ಆರಂಭಿಸಿದ್ದಾರೆ. ಇದರೊಂದಿಗೆ ರೈಲ್ವೆ ಅಧಿಕಾರಿಗಳು ಕೂಡ ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ.
ಶೀಘ್ರದಲ್ಲೇ ಬೋಗಿಗಳನ್ನು ಟ್ರ್ಯಾಕ್‌ನಿಂದ ಹೊರತೆಗೆದು ಕಾರ್ಯಾಚರಣೆಯನ್ನು ಸಾಮಾನ್ಯಗೊಳಿಸಲಾಗುವುದು ಎಂದು ಹೇಳಲಾಗುತ್ತಿದೆ.