ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಹದಿನೈದು ದಿನಗಳ ಕಾಲ ಚಿಕೆತ್ಸೆ ಪಡೆದಿರುವ ಲಕ್ಷ್ಮೀ ಹೆಬ್ಬಾಳಕರ ಮನೆಗೆ ಮರಳಿದ್ದಾರೆ. ವೈದ್ಯರು ಮತ್ತಷ್ಟು ವಿಶ್ರಾಂತಿ ಹೇಳಿದ್ದು, ವೈಧ್ಯರ ಸೂಚನೆಯಂತೆ ವಿಶ್ರಾಂತಿ ತೆಗೆದುಕೊಳ್ಳುವದಾಗಿ ಹೇಳಿದ್ದಾರೆ.
ಮತ್ತೆ ನನಗೆ ಪುನರ್ಜನ್ಮ ಸಿಕ್ಕಂತಾಗಿದ್ದು, ಎಲ್ಲರ ಪ್ರಾರ್ಥನೆಯಿಂದ ಬದುಕಿ ಬಂದಿದ್ದೇನೆ ಎಂದ ಲಕ್ಷ್ಮೀ, ಆದಷ್ಟು ಶೀಘ್ರದಲ್ಲಿ ಮತ್ತೆ ಕೆಲಸದಲ್ಲಿ ತೊಡಗಿಕೊಳ್ಳುತ್ತೇನೆ ಎಂದಿದ್ದಾರೆ.