Download Our App

Follow us

Home » ಅಪರಾಧ » ಹುಬ್ಬಳ್ಳಿಯಲ್ಲಿ ಮೂವರಿಗೆ ಬಿತ್ತು ಗುಂಡೇಟು

ಹುಬ್ಬಳ್ಳಿಯಲ್ಲಿ ಮೂವರಿಗೆ ಬಿತ್ತು ಗುಂಡೇಟು

ಹುಬ್ಬಳ್ಳಿ ನಿನ್ನೇ ತಡರಾತ್ರಿ ಮತ್ತೊಂದು ಕೊಲೆಗೆ ಸಾಕ್ಷಿಯಾಗಿದೆ. ಲಿಂಗರಾಜ ನಗರದ ಗೋಲ್ಡನ್ ಹೈಟ್ಸ್ ಬಾರ್ ನ ಪಾರ್ಕಿಂಗ್ ಏರಿಯಾದಲ್ಲಿ ಆಕಾಶ ವಾಲ್ಮೀಕಿ ಎಂಬಾತನನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. 

ಹುಬ್ಬಳ್ಳಿಯಲ್ಲಿ ನಡೆದ ಈ ಕೊಲೆಯಿಂದ ಜನ ಆತಂಕಗೊಂಡಿದ್ದಾರೆ. ಪ್ರಕರಣದ ಸಂಬಂದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ. 

ಪೂಲೀಸರು ಕೊಲೆಗಡುಕರನ್ನು ಬಂಧಿಸಲು ಹೋದಾಗ, ಪೊಲೀಸರ ಮೇಲೆ ಹಲ್ಲೆ ಮಾಡಿದ ಕಿರಾತಕರ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ಬಂಧಿತರನ್ನು, ಆನಂದನಗರದ ಅಭಿಷೇಕ ಶಿರೂರ, ವಿನೋದ ಅಂಬಿಗೇರ ಹಾಗೂ ಯಲ್ಲಪ್ಪ ಕೋಟಿ ಎಂದು ಗುರುತಿಸಲಾಗಿದೆ. ಆಕಾಶನನ್ನು ಕೊಲೆ ಮಾಡುವ ದೃಶ್ಯ ಸಿ ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಹುಬ್ಬಳ್ಳಿ ಧಾರವಾಡ ಸುರಕ್ಷಿತವಾಗಿ, ನೆಮ್ಮದಿಯಾಗಿ ಇರಬೇಕಾದರೆ, ಎನ್ಕೌಂಟರ್ ಒಂದೇ ಮಾರ್ಗ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಅಪರಾಧಿಕ ಕೃತ್ಯಗಳಲ್ಲಿ ತೊಡಗಿಕೊಂಡವರಿಗೆ ಭಯ ಇಲ್ಲದಂತಾಗಿದ್ದು, ಹುಬ್ಬಳ್ಳಿ ಧಾರವಾಡ ಜನ ನೆಮ್ಮದಿಯಿಂದ ಬದುಕಬೇಕಾದರೆ ಎನ್ಕೌಂಟರ್ ಮಾಡಲೇಬೇಕು ಅನ್ನೋ ಮಾತು ಕೇಳಿ ಬರುತ್ತಿದೆ.

Karnataka Files
Author: Karnataka Files

Leave a Comment

RELATED LATEST NEWS

error: Content is protected !!