ಭೂಗತರಾಗಿದ್ದ ಶೃಂಗೇರಿಯ ನಕ್ಷಲ್ ರವೀಂದ್ರ ಎಂಬುವವರು ಇಂದು ಚಿಕ್ಕಮಗಳೂರಿನಲ್ಲಿ ಎಸ್ ಪಿ ವಿಕ್ರಮ ಅಮಟೆ ಹಾಗೂ ಜಿಲ್ಲಾಧಿಕಾರಿ ಮೀನಾ ನಾಗರಾಜ ಎದುರು ಶರಣಾದರು.
ಕಳೆದ 18 ವರ್ಷಗಳಿಂದ ಭೂಗತರಾಗಿದ್ದ ರವೀಂದ್ರರ ಮೇಲೆ ಒಟ್ಟು 21 ಪ್ರಕರಣಗಳಿದ್ದವು. ಕೇರಳದಲ್ಲಿ 8 ಹಾಗೂ ಚಿಕ್ಕಮಗಳೂರಿನಲ್ಲಿ 13 ಕೇಸುಗಳು ದಾಖಲಾಗಿದ್ದವು.
ಧಾರವಾಡದ ಸಾಧನಾ ಸಂಸ್ಥೆಯ ಡಾ. ಇಸಬೆಲ್ಲಾ ಝೆವಿಯರ, ರಮೇಶ ನಗರಕರ, ವಿ ಎಸ್ ಶ್ರೀಧರ, ವೆಂಕಟೇಶ, ಕೆ ಎಲ್ ಅಶೋಕ, ಸುರೇಶ ನಾಯ್ಕ, ಗೌಸ್ ಮೋಹಿದ್ದಿನ, ವಕೀಲರಾದ ಶ್ರೀಪಾದ ಸಮ್ಮುಖದಲ್ಲಿ ನಕ್ಸಲ್ ರವೀಂದ್ರ ಜಿಲ್ಲಾಡಳಿತದ ಮುಂದೆ ಶರಣಾದರು.
ಇದರೊಂದಿಗೆ ಈಗ ಕರ್ನಾಟಕ, ನಕ್ಸಲ್ ಮುಕ್ತ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.