ಮೈಕ್ರೋ ಫೈನಾನ್ಸ ಕಿರುಕುಳಕ್ಕೆ ಹಾವೇರಿಯಲ್ಲಿ ಓರ್ವ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಹಾವೇರಿ ಜಿಲ್ಲೆ ರಾಣಿಬೇನ್ನೂರು ತಾಲೂಕಿನ ಅಡವಿ ಆಂಜನೇಯ ಬಡಾವಣೆಯಲ್ಲಿ ಈ ಘಟನೆ ನಡೆದಿದೆ.
42 ವರ್ಷ ವಯಸ್ಸಿನ ಮಾಲತೇಶ ನಾಗಪ್ಪ ಅರಸಿಕೇರಿ ಫೈನಾನ್ಸ ನವರ ಕಿರುಕುಳಕ್ಕೆ ಸಾವನ್ನಪ್ಪಿದ್ದಾನೆ.
ಅಡವಿ ಆಂಜನೇಯ ಬಡಾವಣೆಯಲ್ಲಿ ಹೇರ್ ಕಟಿಂಗ್ ಶಾಪ್ ನಡೆಸುತ್ತಿದ್ದ ಮಾಲತೇಶ, ನಾಲ್ಕು ಲಕ್ಷಕ್ಕೂ ಹೆಚ್ಚು ಸಾಲ ಮಾಡಿದ್ದ.
ಆತನ ಧರ್ಮಪತ್ನಿ ಗೀತಾ, ತವರು ಮನೆ ದಾವಣಗೆರೆಗೆ ಸಾಲ ಕಟ್ಟಲು ಹಣ ತರಲು ಹೋಗಿದ್ದರು.
ಅತ್ತ ಗೀತಾ, ದಾವಣಗೆರೆಗೆ ಹೋದ ಬೆನ್ನಲ್ಲೆ ಮಾಲತೇಶ ನೇಣಿಗೆ ಶರಣಾಗಿದ್ದಾರೆ.
ಎರಡು ಮಕ್ಕಳು ಅದ್ರಲ್ಲಿ ಎಳು ತಿಂಗಳು ಕಂದಮ್ಮನನ್ನ ಹೊಂದಿದ್ದ ಮಾಲತೇಶ ನೇಣಿಗೆ ಶರಣಾಗಿದ್ದಾರೆ.
ರಾಣೆಬೇನ್ನೂರು ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.