ಅಮಿತಾಬ್ ಬಚ್ಚನ ಮೊಮ್ಮಗಳು, ಐಶ್ವರ್ಯ ಹಾಗೂ ಅಭಿಷೇಕ ಬಚ್ಚನ್ ಮಗಳು, 13 ವರ್ಷದ ಆರಾಧ್ಯ ಬಚ್ಚನ್ ತಮ್ಮ ಆರೋಗ್ಯದ ಬಗ್ಗೆ ಸುಳ್ಳು ಮಾಹಿತಿ ಹರಡಿರುವ ಕಾರಣಕ್ಕೆ ಹೈಕೋರ್ಟ್ ಮೆಟ್ಟಲೇರಿದ್ದಾರೆ.
ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡಿದ್ದಕ್ಕಾಗಿ ದೆಹಲಿ ಹೈಕೋರ್ಟ್ ಹಲವಾರು ಯೂಟ್ಯೂಬ್ ಚಾನೆಲ್‌ಗಳು ಮತ್ತು ವೆಬ್‌ಸೈಟ್‌ಗಳಿಗೆ ನೋಟಿಸ್ ಜಾರಿ ಮಾಡಿದೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
2023 ರಲ್ಲಿ ಆರಾಧ್ಯ ಬಚ್ಚನ್ ಅವರ ಬಗ್ಗೆ ಆರೋಗ್ಯಕ್ಕೆ ಸಂಬಂಧಿಸಿದ ತಪ್ಪು ಮಾಹಿತಿಯನ್ನು ಪ್ರಸಾರ ಮಾಡದಂತೆ ನ್ಯಾಯಾಲಯವು ಈ ಹಿಂದೆ ಅನೇಕ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿತ್ತು. ಆಕ್ಷೇಪಾರ್ಹ ವೆಬ್‌ಸೈಟ್‌ಗಳು, ಯೂಟ್ಯೂಬ್ ಚಾನೆಲ್‌ಗಳ ಜೊತೆಗೆ, ನ್ಯಾಯಾಲಯವು ಪ್ರಕರಣದ ಕುರಿತು ಗೂಗಲ್‌ಗೆ ನೋಟಿಸ್ ಕಳುಹಿಸಿದೆ.
ಈ ಪ್ರಕರಣದ ವಿಚಾರಣೆಯನ್ನು ಮಾರ್ಚ್ 17 ರ ವರೆಗೆ ಮುಂದೂಡಲಾಗಿದೆ.
ವೆಬ್‌ಸೈಟ್‌ಗಳು, ಯೂಟ್ಯೂಬ್ ಚಾನೆಲ್‌ಗಳು ಆರಾಧ್ಯ ಬಚ್ಚನ್ “ತೀವ್ರವಾಗಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ” ಎಂದು ಸುಳ್ಳು ಸುದ್ದಿ ಮಾಡಿದ್ದರೆ, ಮತ್ತೊಂದೆಡೆ ನಿಧನರಾಗಿದ್ದಾರೆ ಎಂದು ಹೇಳುವ ವೀಡಿಯೊಗಳನ್ನು ತೋರಿಸಿದ್ದವು.