ಭಾರತದ ಜೈಲುಗಳಿಗಿಂತ ವಿದೇಶಗಳಲ್ಲಿನ ಜೈಲುಗಳಲ್ಲಿ ಐಷಾರಾಮಿ ಕೊಠಡಿಗಳಿವೆ. ಕೈದಿಗಳಿಗಾಗಿ ಉತ್ತಮ ದರ್ಜೆಯ ಸೌಲಭ್ಯ ನೀಡಲಾಗಿದೆ.
ನಾವು ಇವತ್ತು ನಾರ್ವೆ ದೇಶದ ಜೈಲಿನ ಸಂಪೂರ್ಣ ಚಿತ್ರಣವನ್ನು ನಿಮ್ಮೆದೆರು ಇಡುತ್ತಿದ್ದೇವೆ.
ಜೈಲಿನ ಒಳಭಾಗವು ನಾರ್ವೆಯ ಜೈಲಿನಲ್ಲಿ ಪ್ರತಿಯೊಬ್ಬ ಖೈದಿಯು ತನ್ನದೇ ಆದ ಟಿವಿ ಹೊಂದಿದ ಕೋಣೆಯನ್ನು ಹೊಂದಿರುತ್ತಾನೆ.
ಅಪಾರ್ಟ್ಮೆಂಟ್ನಲ್ಲಿ ಲಿವಿಂಗ್ ರೂಮ್ ಮತ್ತು ಅಡುಗೆ ಮನೆ ಇದೆ. ಕೈದಿಗಳಿಗೆ ಮೆಕ್ಯಾನಿಕ್ಸ್, ಮರದ ಉತ್ಪನ್ನಗಳು ಮತ್ತು ಬಟ್ಟೆ ಕಾರ್ಯಾಗಾರಗಳಲ್ಲಿ ಕೆಲಸ ನೀಡಲಾಗುತ್ತದೆ.
ಕೈದಿಗಳು ಪೂರ್ಣ ಪ್ರಾಯೋಗಿಕ ಕಾರ್ಯಾಗಾರದ ಪ್ರಮಾಣಪತ್ರವನ್ನು ಜೈಲಿನಲ್ಲಿಯೇ ಪಡೆಯಬಹುದಾಗಿದೆ.
ಹೊರಾಂಗಣದಲ್ಲಿ, ಅಡುಗೆ, ಲಾಂಡ್ರಿ ನಿರ್ವಹಣೆ ಮತ್ತು ಶುಚಿಗೊಳಿಸುವ ಕೆಲಸದಲ್ಲಿ ಸಾಂದರ್ಭಿಕ ಉದ್ಯೋಗದ ಅವಕಾಶಗಳನ್ನು ಕಲ್ಪಿಸಲಾಗಿದೆ.
ಜೈಲಿನೊಳಗೆ ಒಂದು ಅಂಗಡಿ, ಕೆಫೆಟೇರಿಯಾ, ಭೇಟಿ ಕೊಠಡಿ, ತರಗತಿ ಕೊಠಡಿಗಳು ಮತ್ತು ಗ್ರಂಥಾಲಯವಿದೆ. ಹೆಚ್ಚುವರಿಯಾಗಿ, ಕೈದಿಗಳ ಅಗತ್ಯತೆಗಳ ಆಧಾರದ ಮೇಲೆ ಮನರಂಜನಾ ಚಟುವಟಿಕೆಗಳ ಜೊತೆ, ವಿರಾಮದ ಕೊಠಡಿಗಳಿವೆ.
ಸಾಮಾನ್ಯವಾಗಿ ಬಾಸ್ಕೆಟ್‌ಬಾಲ್, ಟೆನ್ನಿಸ್ ಮತ್ತು ವಾಲಿಬಾಲ್‌ನಂತಹ ಕ್ರೀಡೆಗಳು ಕೈದಿಗಳಿಗೆ ಮಿಸಲಿರಿಸಲಾಗಿದೆ. ಸಂಗೀತ ಕಚೇರಿಗಳು, ಗಿಟಾರ್ ಕೋರ್ಸ್‌ಗಳು, ಚಿತ್ರಕಲೆ ಮುಂತಾದ ವಿವಿಧ ಕೋರ್ಸ್‌ಗಳು ಮತ್ತು ಕಾರ್ಯಕ್ರಮಗಳನ್ನು ಜೈಲಿನಲ್ಲಿ ಆಯೋಜಿಸಲಾಗುತ್ತದೆ.