ತಮಿಳುನಾಡಿನ ನಾಗಪಟ್ಟಣಂ ಮತ್ತು ತಿರುವರೂರು ಜಿಲ್ಲೆಗಳ ನಾಲ್ಕು ಮಠಗಳ ಮುಖ್ಯಸ್ಥರಾಗಿ ತನ್ನನ್ನು ಗುರುತಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಸಲ್ಲಿಸಿದ್ದ ಮೇಲ್ಮನವಿಯನ್ನು ಮದ್ರಾಸ್ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ಇಂದರಿಂದಾಗಿ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ವಾಮೀಜಿಗೆ ಹಿನ್ನೆಡೆಯಾದಂತಾಗಿದೆ. ಸಧ್ಯ ನಿತ್ಯಾನಂದ ಸ್ವಾಮಿಗಳು, ತಮ್ಮದೇ ಕೈಲಾಸ ದೇಶದಲ್ಲಿ ಬಿಡಾರ ಹೂಡಿದ್ದಾರೆ.