ಕುಂಭಮೇಳಕ್ಕೆ ಹೋಗಿ ವಾಪಸಾಗುವ ಸಂದರ್ಭದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬೆಳಗಾವಿ ಮೂಲದ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮಧ್ಯಪ್ರದೇಶದ ಇಂದೂರ ಬಳಿ ಇರುವ ಮಾಣಪುರ ಬಳಿ ಈ ಭೀಕರ ದುರಂತ ಸಂಭವಿಸಿದೆ. ಮೃತಪಟ್ಟ ನಾಲ್ವರು ಬೆಳಗಾವಿಯ ಗಣೇಶಪುರದ ನಿವಾಸಿಗಳೆಂದು ಹೇಳಲಾಗಿದೆ.
ಬೆಳಗಾವಿಯ ಒಟ್ಟು 18 ಜನ ಟ್ರಾವಲರ್ ಬಾಡಿಗೆ ಮಾಡಿಕೊಂಡು ಕುಂಭಮೇಳಕ್ಕೆ ಹೋಗಿದ್ದರು ಎನ್ನಲಾಗಿದೆ. ಈ ಪೈಕಿ ಇನ್ನಿಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.