ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿಯವರು ಇಂದು ಕಿತ್ತೂರಿನಲ್ಲಿ ಜನಸಂಪರ್ಕ ಸಭೆ ನಡೆಸಿದರು.
ದಿನದ ದುಡಿಮೆ ಮಾಡಿಕೊಂಡು ಬದುಕು ಸಾಗಿಸುವ ಟಮ್ ಟಮ್ ವಾಹನಗಳನ್ನು ಹಿಡಿದು ದಂಡ ಹಾಕುತ್ತಿರುವ ಪೊಲೀಸರ ಮೇಲೆ ಗರಂ ಆದರು.
ದುಡಿಯುವವರ ಪರ ದ್ವನಿ ಎತ್ತಿದ ಶಾಸಕ ವಿನಯ ಕುಲಕರ್ಣಿಯವರು, ಸಣ್ಣ ಪುಟ್ಟ ವಾಹನಗಳನ್ನು ಇಟ್ಟುಕೊಂಡು ಹೊಟ್ಟೆ ತುಂಬಿಸಿಕೊಳ್ಳುವವರಿಗೆ 10 ಸಾವಿರ ರೂಪಾಯಿ ದಂಡ ಹಾಕುತ್ತಿರುವದಕ್ಕೆ ತರಾಟೆಗೆ ತೆಗೆದುಕೊಂಡರು.
ಕುಡಿದು ವಾಹನ ಚಲಾಯಿಸುವವರು, ಧಾಖಲೆಗಳಿಲ್ಲದೆ ವಾಹನ ಚಲಾಯಿಸುವವರ ಮೇಲೆ ದಂಡ ಹಾಕಿ ಆದರೆ, ದಿನದ ದುಡಿಮೆ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವವರ ಮೇಲೆ ದಂಡ ಹಾಕುವದು ಸರಿಯಲ್ಲ ಎಂದು ಹೇಳಿದರು.
ಜನಸಂಪರ್ಕ ಸಭೆಯಲ್ಲಿ ಇಂದು ಶಾಸಕ ವಿನಯ ಕುಲಕರ್ಣಿಯವರು ಸ್ಥಳದಲ್ಲಿಯೇ ಕೆಲವು ಸಮಸ್ಯೆಗಳಿಗೆ ಪರಿಹಾರ ನೀಡಿದರು.
