ಹುಬ್ಬಳ್ಳಿ ಧಾರವಾಡದ ಮೋಸ್ಟ ಡೇಂಜರಸ್ ರಸ್ತೆಯಾಗಿರುವ BRTS ರಸ್ತೆಯಲ್ಲಿ ಸಂಚಾರಕ್ಕೆ ಕುಂದು ತರುತ್ತಿದ್ದ ಗ್ರಿಲ್ ಗಳನ್ನು ಜಿಲಾನಿ ಖಾಜಿ ಹಾಗೂ ಸಂಚಾರಿ ಪೊಲೀಸರು ತೆರವುಗೊಳಿಸಿದ್ದಾರೆ.
ಅತೀ ಹೆಚ್ಚು ಅಪಘಾತದ ವಲಯ ಎಂದು ಕರೆಯುವ ಧಾರವಾಡದ ಟೋಲ್ ನಾಕಾ ಬಳಿ BRTS ರಸ್ತೆಯಲ್ಲಿನ ಗ್ರಿಲ್ ಗಳು ಉರುಳಿ ಬಿದ್ದಿದ್ದವು. ಇದು ಅಪಘಾತಕ್ಕೆ ಕಾರಣವಾಗುತ್ತಿತ್ತು.
ಇದನ್ನು ಗಮನಿಸಿದ ಜಿಲಾನಿ ಖಾಜಿ, ಸಂಚಾರಿ ಪೊಲೀಸರಾದ ಹುಲಿಗೆಪ್ಪಾ, ಅತ್ತಾರ ಹಾಗೂ ಸಂಜೀವ್ ಎಂಬುವವರ ಸಹಾಯದಿಂದ ಸರಿಯಾಗಿ ಜೋಡಿಸಿಟ್ಟಿದ್ದಾರೆ.
ಸಂಚಾರಿ ಪೋಲಿಸರ ಸಮಯಪ್ರಜ್ಞೆಗೆ ಸಾರ್ವಜನಿಕರು ಶ್ಲಾಘಿಸಿದ್ದಾರೆ.
