Download Our App

Follow us

Home » ಕರ್ನಾಟಕ » ಏನ್ ದೋಸ್ತ್, ಹೆಂಗ್ ಇದ್ದಿ. ಚಡ್ಡಿ ದೋಸ್ತರ್ ಜೊತೆ ಹರಟೆ ಹೊಡೆದ ಪ್ರಲ್ಲಾದ ಜೋಶಿ

ಏನ್ ದೋಸ್ತ್, ಹೆಂಗ್ ಇದ್ದಿ. ಚಡ್ಡಿ ದೋಸ್ತರ್ ಜೊತೆ ಹರಟೆ ಹೊಡೆದ ಪ್ರಲ್ಲಾದ ಜೋಶಿ

ಕೇಂದ್ರ ಸಚಿವ ಪ್ರಲ್ಲಾದ ಜೋಶಿಯವರು ಬೆಂಗಳೂರಿನಲ್ಲಿ ಚಡ್ಡಿ ದೋಸ್ತರ್ ಜೊತೆ ಹರಟೆ ಹೊಡೆದರು.

1978 ರ ಎಸ್ ಎಸ್ ಎಲ್ ಸಿ ಬ್ಯಾಚಿನ ದೋಸ್ತರು ಬೆಂಗಳೂರಲ್ಲಿ ಸೇರಿದ್ದರು. ಮದುವೆ, ಮಕ್ಕಳ ಬೆಗ್ಗೆ ಪರಸ್ಪರ ಚರ್ಚೆ ನಡೆಸಿ, ಕಲಿಸಿದ ಗುರುಗಳನ್ನು ನೆನಪು ಮಾಡಿಕೊಂಡು, ಹಳೆಯ ನೆನಪುಗಳನ್ನು ಮೆಲಕು ಹಾಕಿದರು.

ಇವೆಲ್ಲವನ್ನು ಇವತ್ತು ಪ್ರಲ್ಲಾದ ಜೋಶಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 

ಏನ್ ದೋಸ್ತ…ಹೆಂಗ ಇದ್ದಿ…ಎಷ್ಟ ದಿವಸದ ಮ್ಯಾಲೆ ಭೇಟಿ…ಏನ್ತಾನ…ಎಲ್ಲಾ ಆರಾಮ ಅಲಾ ಮತ್ತ…”

’ಮತ್ತೇನಪಾ…ಮಕ್ಕಳದೇಲ್ಲಾ ಲಗ್ನ ಆತ ಇಲ್ಲ…ಎಷ್ಟ ಮೊಮ್ಮಕ್ಕಳ ಈಗ….’

’ಹೆಂಗಿದ್ದಿ ದೋಸ್ತ…ಏನ ಎಲ್ಲಾರೂ ಮಕ್ಕಳ ಜೊತಿ ಬೆಂಗಳೂರ ಸೇರಿ…ಹುಬ್ಬಳ್ಳಿ ಮರತ ಬಿಟ್ಟಿರಿ ಕಾಣ್ತದ…’

’ನೀ ಏನಪಾ…ದೊಡ್ಡ ಮನಷ್ಯಾ ಈಗ…..union minister ನಮ್ಮ ಕೈಯಾಗ ಎಲ್ಲಿ ಸಿಗ್ತಿ….’

ಇದ ಇವತ್ತ ನಾ 1978ರಾಗ ಮ್ಯಾಟ್ರಿಕ್ ಕಲಿಬೇಕಾರ ನನ್ನ ಜೊತಿ ನ್ಯೂ ಇಂಗ್ಲೀಷ್ ಸ್ಕೂಲ ಒಳಗ ಕಲಿತಿದ್ದ ದೋಸ್ತರ ಬೆಂಗಳೂರಾಗ ಸಿಕ್ಕಾಗ ನಡೆದ ಹರಟಿ…

ಒಂದಿಷ್ಟ ದೋಸ್ತರನ್ನಂತೂ ಭೇಟ್ಟಿ ಆಗಲಾರದ ಎಷ್ಟ ವರ್ಷ ಆಗಿತ್ತೋ ಏನೋ…ಆದರ ಆತ್ಮೀಯತೆ ಏನ ಕಡಮಿ ಇರಲಿಲ್ಲಾ…ಎಷ್ಟಂದರೂ ದೋಸ್ತರ ದೋಸ್ತರ…ಯಾರ ಯಾ ಪೋಸ್ಟನಾಗ ಇದ್ದರೇನ ’ಬಾಲ್ಯದ ಆಟ…. ಆ ಹುಡುಗಾಟ… ಇನ್ನು ಮಾಸಿಲ್ಲಾ!’ ಅಂತಾರಲಾ ಹಂಗ ಇವತ್ತ ನನ್ನ ಹಳೇ ದೋಸ್ತರನ್ನ ಎಲ್ಲಾ ಭೇಟ್ಟಿ ಆಗಿ ಭಾರಿ ಖುಶಿ ಆತ…..ಹಂಗ ಎಲ್ಲಾರೂ ಸೇರಿ ಹಳೇದನ್ನ ಎಲ್ಲಾ ನೆನಸಿಗೊಂಡ ಅದರಾಗ ನಮಗ ಕಲಿಸಿದ್ದ ಗುರುಗಳ… ಲಕ್ಷ್ಮೇಶ್ವರ ಸರ್, ಕೊಪ್ಪರ ಸರ್ , ಭುಜಂಗ ಸರ್ …ನಾತು ಸರ್ ….ಏನ್ ಜಿ ರಾಯಚೂರು ಸರ್. ಮುದಕವಿ ಸರ್ ಎಲ್ಲಾರನೂ ನೆನಸಿಕೊಂಡ, ನಮಿಸಿಕೊಂಡ ಅಗದಿ ಸಂತೋಷ ಆತ ಅನ್ನರಿ….

ಏನ ಅನ್ನರಿ…’ ಸ್ನೇಹದ ಕಡಲಲ್ಲೀ..ನೆನಪಿನ ದೋಣಿಯಲೀ ’ ಮನಷ್ಯಾ ಆವಾಗ ಇವಾಗ ಟೈಮ್ ತಗದ ಪ್ರಯಾಣ ಮಾಡಬೇಕ…

ಆವಾಗ ನಾವ ಎಷ್ಟ ದೂರ ಜೀವನದಾಗ ನಡದೇವಿ ಅನ್ನೋದ ಗೊತ್ತಾಗೋದ…

Karnataka Files
Author: Karnataka Files

Leave a Comment

RELATED LATEST NEWS

Top Headlines

ಏನ್ ದೋಸ್ತ್, ಹೆಂಗ್ ಇದ್ದಿ. ಚಡ್ಡಿ ದೋಸ್ತರ್ ಜೊತೆ ಹರಟೆ ಹೊಡೆದ ಪ್ರಲ್ಲಾದ ಜೋಶಿ

ಕೇಂದ್ರ ಸಚಿವ ಪ್ರಲ್ಲಾದ ಜೋಶಿಯವರು ಬೆಂಗಳೂರಿನಲ್ಲಿ ಚಡ್ಡಿ ದೋಸ್ತರ್ ಜೊತೆ ಹರಟೆ ಹೊಡೆದರು. 1978 ರ ಎಸ್ ಎಸ್ ಎಲ್ ಸಿ ಬ್ಯಾಚಿನ ದೋಸ್ತರು ಬೆಂಗಳೂರಲ್ಲಿ ಸೇರಿದ್ದರು.

Live Cricket

error: Content is protected !!