Download Our App

Follow us

Home » ಕಾನೂನು » ಏಪ್ರಿಲ್ 1 ರಿಂದ ರಾಜ್ಯದಲ್ಲಿ ಟೋಲ್ ಶುಲ್ಕ ದರ ಹೆಚ್ಚಳ

ಏಪ್ರಿಲ್ 1 ರಿಂದ ರಾಜ್ಯದಲ್ಲಿ ಟೋಲ್ ಶುಲ್ಕ ದರ ಹೆಚ್ಚಳ

ಏಪ್ರಿಲ್ 1 ರಿಂದ ಕರ್ನಾಟಕದಲ್ಲಿ ಟೋಲ್ ದರ ಶೇ. 3-5 ರಷ್ಟು ಹೆಚ್ಚಳವಾಗಲಿದೆ.

ವರದಿಯ ಪ್ರಕಾರ, ಕಣಿಮಿಣಿಕೆ ಮತ್ತು ಶೇಷಗಿರಿಹಳ್ಳಿ (ಬೆಂಗಳೂರು-ಮೈಸೂರು), ನಂಗ್ಲಿ (ಬೆಂಗಳೂರು-ತಿರುಪತಿ), ಬಾಗೇಪಲ್ಲಿ (ಬೆಂಗಳೂರು-ಹೈದರಾಬಾದ್), ಸಾದಹಳ್ಳಿ (ಬೆಂಗಳೂರು ವಿಮಾನ ನಿಲ್ದಾಣ ರಸ್ತೆ), ಮತ್ತು ಹುಲಿಕುಂಟೆ ಮತ್ತು ನಲ್ಲೂರು ದೇವನಹಳ್ಳಿ (ಸ್ಯಾಟಲೈಟ್ ಟೌನ್ ಆರ್ಸಿಂಗ್ ರೋಡ್ ಟೌನ್) ಈ ಪ್ಲಾಜಾಗಳಲ್ಲಿ ಟೋಲ್ ಶುಲ್ಕಗಳು ಹೆಚ್ಚಾಗಲಿವೆ ಎನ್ನಲಾಗಿದೆ.

ಕರ್ನಾಟಕವು ಏಪ್ರಿಲ್ 1 ರಿಂದ ಟೋಲ್ ದರಗಳನ್ನು ಶೇ. 3-5 ರಷ್ಟು ಹೆಚ್ಚಿಸಲು ಸಜ್ಜಾಗಿದ್ದು, ಮುಂದಿನ ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುತ್ತದೆ ಎಂದು ಗೊತ್ತಾಗಿದೆ.

ಸಧ್ಯ ಕರ್ನಾಟಕದಲ್ಲಿ 66 ಟೋಲ್ ಪ್ಲಾಜಾಗಳಿವೆ. ಹೆಚ್ಚಿನ ಟೋಲ್ ಪ್ಲಾಜಾಗಳಲ್ಲಿ ಪರಿಷ್ಕೃತ ದರಗಳು ಅನ್ವಯವಾಗಲಿವೆ.

ಮಾರ್ಚ್ 19 ರಂದು ರಾಜ್ಯಸಭೆಗೆ ಗಡ್ಕರಿ ಅವರು ನೀಡಿದ ಹೇಳಿಕೆ ಪ್ರಕಾರ, 2023-24ರಲ್ಲಿ ಭಾರತದಲ್ಲಿ 64,809.86 ಕೋಟಿ ರೂಪಾಯಿ ಟೋಲ್ ಸಂಗ್ರಹವಾಗಿತ್ತು.

Karnataka Files
Author: Karnataka Files

Leave a Comment

RELATED LATEST NEWS

Top Headlines

ನಿರೀಕ್ಷಣಾ ಜಾಮೀನು ಅರ್ಜಿ ವಜಾ. IPS ಅಧಿಕಾರಿ ಶ್ರೀನಾಥ ಜೋಶಿಗೆ ಬಂಧನದ ಭೀತಿ

ಲೋಕಾಯುಕ್ತ ರೇಡ್   ಹೆಸರಿನಲ್ಲಿ ಸರ್ಕಾರಿ ನೌಕರರಿಂದ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ಐಪಿಎಸ್‌ ಅಧಿಕಾರಿ ಶ್ರೀನಾಥ್‌ ಜೋಶಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಶುಕ್ರವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯ

Live Cricket

error: Content is protected !!