ಕರ್ನಾಟಕದ ನಯಾಗರ ಎಂದೇ ಖ್ಯಾತಿ ಪಡೆದಿರುವ ಗೋಕಾಕ್ ಜಲಪಾತವು ಸುಧಾರಿತ ಸಸ್ಪೆಂಡೆಡ್ ರೈಲು ವ್ಯವಸ್ಥೆಯೊಂದಿಗೆ ನವೀಕರಣಗೊಳ್ಳಲಿದೆ.
ಅಲ್ಲಿ ಪರಿಸರ ಸ್ನೇಹಿ ಸಾರಿಗೆ ಶೀಘ್ರದಲ್ಲೇ ಬರಲಿದೆ. ಪ್ರವಾಸೋದ್ಯಮ ಮತ್ತು ಪ್ರವೇಶ ಸಾಧ್ಯತೆಯನ್ನು ಹೆಚ್ಚಿಸಲು ಗೋಕಾಕ್ ಜಲಪಾತದಲ್ಲಿ ‘ಸಸ್ಪೆಂಡೆಡ್ ಸ್ಟ್ರಿಂಗ್ ರೈಲು ಸಾರಿಗೆ ವ್ಯವಸ್ಥೆ’ಯನ್ನು ಯೋಜಿಸಲಾಗಿದೆ.
ಇದಕ್ಕಾಗಿ ಸರ್ಕಾರ ಪ್ರವಾಸೋದ್ಯಮ ಇಲಾಖೆಯಿಂದ ಡಿಪಿಆರ್ ನಡೆಸಲು ತಯಾರಿಯಲ್ಲಿದೆ. ಇನ್ಮೇಲೆ ಗೋಕಾಕ್ ಜಲಪಾತ ಮತ್ತಷ್ಟು ಕಣ್ಮನ ಸೆಳೆಯಲಿದೆ.
