ಹುಬ್ಬಳ್ಳಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರವಾದಿ ಮೊಹಮ್ಮದ ಪೈಗಂಬರ್ ವಿರುದ್ಧ ಅವಹೇಳನಕಾರಿ ಹೇಳಿಕೆ ವಿರುದ್ಧ ಧಾರವಾಡ ಅಂಜುಮನ್ ಸಂಸ್ಥೆ ದೂರು ಧಾಖಲಿಸಿದೆ.
ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಶಾಂತಿ ಕದಡುತ್ತಿದ್ದು, ತಕ್ಷಣ ಬಂಧಿಸಿ ಕ್ರಮ ಕೈಗೊಳ್ಳುವಂತೆ ಧಾರವಾಡ ಅಂಜುಮನ್ ಸಂಸ್ಥೆ ಆಗ್ರಹಿಸಿದೆ.
ಧಾರವಾಡ ಅಂಜುಮನ್ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ, ಅಂಜುಮನ್ ಪರವಾಗಿ ಯತ್ನಾಳ ವಿರುದ್ಧ ದೂರು ಧಾಖಲು ಮಾಡಿದ್ದಾರೆ.
