ಮಲೆನಾಡು ಸೆರಗು ಹೊದ್ದುಕೊಂಡಿರುವ ಧಾರವಾಡದಲ್ಲಿಂದು ಮಳೆರಾಯ ಮುನಿಸಿಕೊಂಡಿದ್ದ.
ಸತತವಾಗಿ ಸುರಿದ ಅರ್ಧ ಘಂಟೆ ಮಳೆಗೆ ಧಾರವಾಡ ನೀರು ನಿರಾಗಿತ್ತು. ಮಳೆ ನೀರಿನಿಂದ ಮುಳುಗಿದ್ದ ಟೋಲ್ ನಾಕಾ ರಸ್ತೆ ಕೆಲ ಹೊತ್ತು ವಾಹನ ಸವಾರರಿಗೆ ಸಾಕು ಸಾಕಾಗಿಸಿತು.
ಇನ್ನು ಹನುಮಂತ ದೇವರ ದೇವಸ್ಥಾನದ ಪಕ್ಕಕ್ಕೆ ಇದ್ದ ಬೃಹತ್ ಮರ ನೋಡು ನೋಡುತ್ತಿದ್ದಂತೆ ಆಟೋ ರಿಕ್ಷಾ ಮೇಲೆ ಉರುಳಿ ಬಿತ್ತು.
ಜಿಲ್ಲಾಸ್ಪತ್ರೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಇದ್ದ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು. ಆಲಿಕಲ್ಲು ಮಳೆ ಅವಾಂತರ ಸೃಷ್ಟಿಸಿತು.
ಇನ್ನು ಜನ್ನತ್ ನಗರ, ಮದಾರಮಡ್ಡಿ, ಲಕ್ಷೀ ಸಿಂಗಂಕೇರಿ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಮಳೆ ನೀರು ನದಿಯಂತೆ ಹರಿಯಿತು.
