ವಿದ್ಯಾಕಾಶಿ ಧಾರವಾಡದಲ್ಲಿ ಶೈಕ್ಷಣಿಕ ಹಂಗಾಮು ಆರಂಭವಾಗಿದೆ. ಎಸ್ ಎಸ್ ಎಲ್ ಸಿ / ಪಿಯುಸಿ ಪರೀಕ್ಷೆಗಳು ಮುಗಿಯುತ್ತಿದ್ದಂತೆ ಹಲವು ತರಬೇತಿ ಸಂಸ್ಥೆಗಳು ಬಾಗಿಲು ತೆರೆದುಕೊಂಡಿವೆ.
ಹೀಗೆ ಬಾಗಿಲು ತೆರೆದುಕೊಂಡು, ಹಣ ಮಾಡಲು ಮುಂದಾಗಿರುವ ತರಬೇತಿ ಸಂಸ್ಥೆಗಳು, ವಿದ್ಯಾರ್ಥಿಗಳನ್ನು ಸೆಳೆಯಲು, ಆಯಾ ಸಂಸ್ಥೆಗಳ ಜಾಹೀರಾತುಗಳು ಮರ ಏರಿ ಕುಳಿತಿವೆ.
ಧಾರವಾಡದ ಅಂದ ಹಾಳು ಮಾಡುತ್ತಿರುವ ಜಾಹೀರಾತು ಫಲಕಗಳು
ಧಾರವಾಡದ ಪ್ರಮುಖ ಸರ್ಕಲಗಳಲ್ಲಿ ನೂರಕ್ಕೂ ಹೆಚ್ಚು ಇರುವ ವಿವಿಧ ತರಬೇತಿ ಸಂಸ್ಥೆಗಳ ಜಾಹೀರಾತು ಫಲಕಗಳನ್ನು ಅಂಟಿಸಲಾಗಿದೆ. ಇವುಗಳು ಧಾರವಾಡದ ಅಂದವನ್ನು ಹಾಳು ಮಾಡಿವೆ.
ಮಾರ್ಗಗಳನ್ನು ತೋರಿಸುವ ಮಾರ್ಗ ಫಲಕಗಳು, ಮರಗಳು, ಗೋಡೆಗಳ ಮೇಲೆ ಮನಸೋ ಇಚ್ಛೆ ಜಾಹೀರಾತು ಫಲಕಗಳನ್ನು ಅಂಟಿಸಲಾಗಿದೆ.
ಕರ್ನಾಟಕ ಕಾಲೇಜು ಬಳಿ ಇರುವ ಮಾರ್ಗ ಫಲಕಕ್ಕೆ, ವಶಿಷ್ಟ ಕ್ಲಾಸಿಸ್, ಧಾರವಾಡ, ಮೊಬೈಲ್ ಸಂಖ್ಯೆ – 9148188800 ತನ್ನ ಜಾಹೀರಾತು ಅಂಟಿಸಿದೆ.
ಇನ್ನು ಮರಕ್ಕೆ ನೇಣು ಹಾಕಿಕೊಂಡಂತೆ, ಧಾರವಾಡದ ಕೋಚಿಂಗ್ ಸೆಂಟರಗಳು ಕಾಲೇಜು ಮುಂಭಾಗದಲ್ಲಿ ಇರುವ ಮರಕ್ಕೆ ಜಾಹೀರಾತನ್ನು ತೂಗು ಹಾಕಿವೆ.
ಮಕ್ಕಳಿಗೆ ಐ ಎಸ್ ಎಸ್, ಕೆ ಎ ಎಸ್, ಪಿ ಎಸ್ ಐ, ಪಿ ಡಿ ಓಗಳನ್ನು ತಯಾರು ಮಾಡುತ್ತೇವೆ ಎಂದು ಹೇಳುವ ತರಬೇತಿ ಸಂಸ್ಥೆಗಳು ಶಿಸ್ತು ಮರೆತಿದ್ದು ವಿಪರ್ಯಾಸ.
ಕರ್ನಾಟಕ ಕಾಲೇಜು ಬಳಿ ಇರುವ ಮರಕ್ಕೆ, ಎಕ್ಸಲೆಂಟ್ ಕೋಚಿಂಗ್ ಸೆಂಟರ್ ಮೊಬೈಲ್ ಸಂಖ್ಯೆ 7204387117. ಹಾಗೂ ವೀಟಾ ತರಬೇತಿ ಸಂಸ್ಥೆ, ಡಿ.ವಿ.ಜಿ ಬೇಸಿಗೆ ಶಿಬಿರ, ಪುಸ್ತಕ ಎಜ್ಯುಕೇಶನ್, ಮಣ್ಣಿನ ಹೆಜ್ಜೆ, ಫಯೋನಿಕ್ಸ್, ಸೇರಿದಂತೆ ವಿವಿಧ ತರಬೇತಿ ಸಂಸ್ಥೆಗಳ ಜಾಹೀರಾತುಗಳನ್ನು ಎಲ್ಲೆಂದರಲ್ಲಿ ಅಂಟಿಸಲಾಗಿದೆ.
ಧಾರವಾಡದ ಹೈಟೆಕ್ ಪರಿಸರವಾದಿಗಳು, ಕೇವಲ ಸನ್ಮಾನ ಸ್ವೀಕರಿಸುತ್ತ ಹೊರಟಿದ್ದು, ಪಾಲಿಕೆ ಆಧಿಕಾರಿಗಳು ಮಲಗಿದ್ದಾರೆ. ಧಾರವಾಡದ ಪ್ರಜ್ಞಾವಂತ ನಾಗರಿಕರು ಇವರನ್ನು ಬಡಿದೆಬ್ಬಿಸಬೇಕಿದೆ.
