ಅಲ್ಪಸಂಖ್ಯಾತ ಇಲಾಖೆ ಸಚಿವ ಬಿ ಝೆಡ್ ಜಮೀರ್ ಅಹ್ಮದ್ ಖಾನ ನಾಳೆ ಮಧ್ಯಾಹ್ನ 4 ಘಂಟೆಗೆ ಧಾರವಾಡ ಅಂಜುಮನ್ ಸಂಸ್ಥೆಗೆ ಭೇಟಿ ನೀಡಲಿದ್ದಾರೆ.
ಅಂಜುಮನ್ ಸಂಸ್ಥೆಯ ಮುಖ್ಯದ್ವಾರ ಉದ್ಘಾಟನೆ ಹಾಗೂ ನೂತನವಾಗಿ ನಿರ್ಮಾಣಗೊಳ್ಳಲಿರುವ ಪಿ ಯು ಕಾಲೇಜಿಗೆ ಸಚಿವರು ಶಿಲಾನ್ಯಾಸ ಮಾಡಲಿದ್ದಾರೆ.
ಇಸ್ಮಾಯಿಲ್ ತಮಟಗಾರ ಅಂಜುಮನ್ ಅಧ್ಯಕ್ಷರಾದ ಬಳಿಕ ಸಂಸ್ಥೆ ಅಭಿವೃದ್ಧಿ ಪತದತ್ತ ಹೊರಟಿದ್ದು, ಜಾತಿ ಭೇಧವಿಲ್ಲದೆ ಸಾವಿರಾರು ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ವಿಧ್ಯಾಭ್ಯಾಸಕ್ಕೆ ವ್ಯವಸ್ಥೆ ಮಾಡಿದ್ದಾರೆ.
