ಹುಬ್ಬಳ್ಳಿ ಧಾರವಾಡ ನಗರಕ್ಕೆ ಶಾಪವಾಗಿ ಪರಿಣಮಿಸಿರುವ BRTS ಬಸ್ ಸಂಚಾರಕ್ಕೆ ಬ್ರೇಕ್ ಬೀಳಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಸ್ವೀಜ್ಜರ ಲ್ಯಾಂಡಿನ HESS AG / HESS INDIA/ SSB AG ಕಂಪನಿಯ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದಾರೆ.
ಮೆಟ್ರೋ ಮಾದರಿಯ ಸಂಚಾರ ವ್ಯವಸ್ಥೆ ದೇಶದಲ್ಲಿ ಮೊದಲ ಬಾರಿಗೆ ಹುಬ್ಬಳ್ಳಿ ಧಾರವಾಡದಲ್ಲಿ ಆರಂಭಗೊಳ್ಳಲಿದೆ.
ಸಂಪೂರ್ಣ ವಿದ್ಯುತ್ ಚಾಲಿತ ಬಸ್ಸುಗಳು ಹುಬ್ಬಳ್ಳಿ ಧಾರವಾಡ ನಡುವೆ ಸಂಚರಿಸಲಿವೆ. ಇವು ಐಷಾರಾಮಿ ವ್ಯವಸ್ಥೆ ಹೊಂದಿದ ಬಸ್ಸುಗಳಾಗಿವೆ.
ಸದ್ಯ ಇವು ಯುರೋಪಿನ ಹಲವು ರಾಷ್ಟ್ರಗಳಲ್ಲಿ ಯಶಸ್ವಿಯಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದ್ದಾರೆ.
ಇದರಲ್ಲಿ ಒಮ್ಮೆಗೆ 250 ಜನ ಪ್ರಯಾಣಿಕರು ಪ್ರಯಾಣ ಕೈಗೊಳ್ಳಬಹುದಾಗಿದ್ದು, ಕಳೆದ ಒಂದು ವರ್ಷದಿಂದ ಯೋಜನೆಯ ಕಾರ್ಯ ಸಾಧ್ಯತೆ ಬಗ್ಗೆ ಅಧ್ಯಯನ ನಡೆಸಿ ಈ ಒಡಂಬಡಿಕೆಗೆ ಸಹಿ ಹಾಕಲಾಗಿದೆ.
ಮುಂದಿನ ಮೂರು ತಿಂಗಳ ಅವಧಿಯಲ್ಲಿ ಡಿ ಪಿ ಆರ್ ನಡೆಸಲು ಹೇಳಲಾಗಿದೆ.
ಈ ಯೋಜನೆಗೆ ಸ್ವೀಜ್ಜರ ಲ್ಯಾಂಡಿನ HESS AG / HESS INDIA/ SSB AG ಕಂಪನಿ ಹಣ ಹೂಡಿಕೆ ಮಾಡಲಿದ್ದು, ಅಂದಾಜು ಮೂರು ಸಾವಿರ ಕೋಟಿ ಹಣ ಹೂಡಿಕೆ ಮಾಡಲಿದೆ ಎಂದು ಹೇಳಲಾಗಿದೆ.
ಸಂತೋಷ ಲಾಡ್ ರ ಕನಸು ನನಸು
ಹುಬ್ಬಳ್ಳಿ ಧಾರವಾಡ ನಡುವೆ ಸಧ್ಯ ಸಂಚರಿಸುತ್ತಿರುವ BRTS ಯೋಜನೆ ಅವೈಜ್ಞಾನಿಕತೆಯಿಂದ ಕೂಡಿದೆ ಎಂದು ಹಲವು ಸಂಘಟನೆಗಳು ಹೋರಾಟ ನಡೆಸಿದ್ದವು.
ಇದೆಲ್ಲದರ ಪರಿಣಾಮ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಖುದ್ದು ಸ್ವೀಜ್ಜರ ಲ್ಯಾಂಡಗೆ ಹೋಗಿ ಈ ಯೋಜನೆ ಬಗ್ಗೆ ಅಧ್ಯಯನ ಮಾಡಿ ಬಂದಿದ್ದರು.
ಸಧ್ಯ ಸಂತೋಷ ಲಾಡ್ ಹುಬ್ಬಳ್ಳಿ ಧಾರವಾಡ ಜನರಿಗೆ ಹೊಸ ಯೋಜನೆ ಪರಿಚಯಿಸಿದ್ದು, ಅವರ ಕನಸು ನನಸಾಗುತ್ತಿದೆ.
