Download Our App

Follow us

Home » ಕಾನೂನು » ಕರ್ನಾಟಕದ ಪೋಷಕರಿಗೆ ದೊಡ್ಡ ಪರಿಹಾರ ! 5.5 ವರ್ಷ ವಯಸ್ಸಿನ ಮಕ್ಕಳಿಗೆ 1 ನೇ ತರಗತಿ ಪ್ರವೇಶಕ್ಕೆ ಅವಕಾಶ

ಕರ್ನಾಟಕದ ಪೋಷಕರಿಗೆ ದೊಡ್ಡ ಪರಿಹಾರ ! 5.5 ವರ್ಷ ವಯಸ್ಸಿನ ಮಕ್ಕಳಿಗೆ 1 ನೇ ತರಗತಿ ಪ್ರವೇಶಕ್ಕೆ ಅವಕಾಶ

ಕರ್ನಾಟಕದ ಪೋಷಕರಿಗೆ ದೊಡ್ಡ ಪರಿಹಾರ ಸಿಕ್ಕಿದೆ. ಸರ್ಕಾರ 5.5 ವರ್ಷ ವಯಸ್ಸಿನ ಮಕ್ಕಳಿಗೆ 1 ನೇ ತರಗತಿ ಪ್ರವೇಶಕ್ಕೆ ಅವಕಾಶ ನೀಡಿ ಆದೇಶ ಹೊರಡಿಸಿದೆ.

ಆದರೆ ಇದು ಈ ವರ್ಷಕ್ಕೆ ಮಾತ್ರ ಸೀಮಿತವಾಗಿದ್ದು, ಮುಂದಿನ ವರ್ಷದಿಂದ ಒಂದನೇ ತರಗತಿ ಸೇರ್ಪಡೆಗೆ ಕನಿಷ್ಠ ವಯಸ್ಸು 6 ವರ್ಷ ತುಂಬಿರಬೇಕಾಗುತ್ತದೆ. 

ವಯಸ್ಸಿನ ಕಾರಣದಿಂದ ದೂರ ಉಳಿಯಬೇಕಿದ್ದ, ರಾಜ್ಯದ ಸುಮಾರು 5 ಲಕ್ಷ ಮಕ್ಕಳು ಇದೀಗ ಒಂದನೇ ತರಗತಿ ಪ್ರವೇಶ ಪಡೆಯಬಹುದಾಗಿದೆ.

ರಾಜ್ಯದಲ್ಲಿ 1ನೇ ತರಗತಿಗೆ ದಾಖಲಾಗಲು ಮಕ್ಕಳು ಜೂನ್ 1 ರೊಳಗೆ 6 ವರ್ಷಗಳನ್ನು ಪೂರ್ಣಗೊಳಿಸಬೇಕು ಎಂಬ ನಿಯಮದ ಕುರಿತು ಇರುವ ಗೊಂದಲವನ್ನು ಪರಿಹರಿಸುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಕೆಎಸ್‌ಸಿಪಿಸಿಆರ್) ಸರ್ಕಾರವನ್ನು ಒತ್ತಾಯಿಸಿತ್ತು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ (DSEL) ಪ್ರಧಾನ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ, KSCPCR ನ ಅಧ್ಯಕ್ಷರಾದ ಕೆ. ನಾಗಣ್ಣ ಗೌಡ ಅವರು, 2025-26ನೇ ಶೈಕ್ಷಣಿಕ ವರ್ಷದಿಂದ ನಿಯಮವನ್ನು ಜಾರಿಗೆ ತರಲು ಇಲಾಖೆ ಕ್ರಮ ಕೈಗೊಂಡಿದೆ ಎಂದು ಹೇಳಿದ್ದರು.

ಇದು ಪೋಷಕರಲ್ಲಿ ಕಳವಳವನ್ನುಂಟುಮಾಡಿತ್ತು. ಮತ್ತು ಅನೇಕ ಪೋಷಕರು ಪ್ರತಿದಿನ ಆಯೋಗಕ್ಕೆ ಭೇಟಿ ನೀಡುತ್ತಿದ್ದರು. 1 ನೇ ತರಗತಿಯ ದಾಖಲಾತಿಗೆ ವಯಸ್ಸಿನ ಮಾನದಂಡಗಳನ್ನು ಸಡಿಲಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಪೋಷಕರು ದುಂಬಾಲು ಬೀಳುತ್ತಿದ್ದರು.

ಹಿಂದಿನ ನಿಯಮಗಳ ಪ್ರಕಾರ ಪ್ರಿ-ಕೆಜಿ (ಕಿಂಡರ್‌ಗಾರ್ಟನ್) ಗೆ ಮಕ್ಕಳನ್ನು ಸೇರಿಸಿಕೊಳ್ಳುವುದರಿಂದ, ಈ ವರ್ಷ ಸುಮಾರು 5 ರಿಂದ 6 ಲಕ್ಷ ವಿದ್ಯಾರ್ಥಿಗಳು ಯುಕೆಜಿ ಮುಗಿಸಿದ ನಂತರ 1 ನೇ ತರಗತಿಗೆ ದಾಖಲಾಗಲು ತೊಂದರೆ ಅನುಭವಿಸುತ್ತಿದ್ದರು.

2025-26ನೇ ಶೈಕ್ಷಣಿಕ ವರ್ಷದಿಂದ 1 ನೇ ತರಗತಿಗೆ ಮಕ್ಕಳನ್ನು ಸೇರಿಸಿಕೊಳ್ಳಲು ನಿಗದಿಪಡಿಸಿದ ವಯಸ್ಸಿನ ಮಿತಿಯನ್ನು ಸಡಿಲಿಸುವಂತೆ ಪೋಷಕರು ವಿನಂತಿಸಿದ್ದರು. ಈಗ ಅವರು ನಿರಾಳರಾಗಿದ್ದಾರೆ.

ಈ ಹಿಂದೆ ಸರ್ಕಾರವು ಶಾಲಾ ಮಕ್ಕಳ ದಾಖಲಾತಿಗೆ ಕನಿಷ್ಠ ವಯಸ್ಸಿನ ಮಿತಿಯನ್ನು ನಾಲ್ಕು ವರ್ಷಗಳು ಮತ್ತು ಎಲ್‌ಕೆಜಿ, ಯುಕೆಜಿ ಮತ್ತು 1 ನೇ ತರಗತಿಗೆ ಗರಿಷ್ಠ ಐದು ವರ್ಷಗಳು ಎಂದು ನಿಗದಿಪಡಿಸಿತ್ತು.

ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009 (RTE ಕಾಯ್ದೆ-2009) ಮತ್ತು ನಿಯಮಗಳು, 2012, ರ ಪ್ರಕಾರ, 1 ನೇ ತರಗತಿಗೆ ಮಗುವನ್ನು ದಾಖಲಿಸಲು ವಯಸ್ಸಿನ ಮಿತಿಯನ್ನು ಜೂನ್ 1 ರ ವೇಳೆಗೆ ಆರು ವರ್ಷಗಳನ್ನು ಕಡ್ಡಾಯವಾಗಿ ಪೂರ್ಣಗೊಳಿಸಿರಬೇಕು ಎಂದು ಹೇಳಿತ್ತು.

ರಾಷ್ಟ್ರೀಯ ಶಿಕ್ಷಣ ನೀತಿ (NEP-2020) ಕೂಡ 1 ನೇ ತರಗತಿಗೆ ಪ್ರವೇಶ ಪಡೆಯಲು ಕನಿಷ್ಠ ವಯಸ್ಸಿನ ಮಿತಿಯನ್ನು ಜೂನ್ 1 ರ ವೇಳೆಗೆ ಆರು ವರ್ಷಗಳು ಎಂದು ಕಡ್ಡಾಯಗೊಳಿಸಿತ್ತು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಬಸನಗೌಡ ಪಾಟೀಲ ಯತ್ನಾಳ ಕ್ಷೇತ್ರದಲ್ಲಿ ವಿಜಯೇಂದ್ರರ ಜನಾಕ್ರೋಶ ಯಾತ್ರೆಗೆ ಸಾಕ್ಷಿಯಾದ ಸಾವಿರಾರು ಜನ

ಬಿಜೆಪಿಯಿಂದ ಉಚ್ಚಾಟನೆಯಾದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ತವರು ಕ್ಷೇತ್ರದಲ್ಲಿ ಇಂದು ಬಿಜೆಪಿಯ ಜನಾಕ್ರೋಶ ಯಾತ್ರೆ ನಡೆಯಿತು.  ಬಸನಗೌಡ ಪಾಟೀಲ ಯತ್ನಾಳರ ಉಚ್ಚಾಟನೆ ಬಳಿಕ ಅವರ

Live Cricket

error: Content is protected !!