ನವಲಗುಂದ ಕ್ಷೇತ್ರದ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರ ಸಂಬಂಧಿಕರೆಂದು ಗುರುತಿಸಿಕೊಂಡಿದ್ದ ದೇವರಾಜ ದಾಡಿಬಾವಿ, ನವಲಗುಂದ ರಾಜಕಾರಣಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಈ ಹಿಂದೆ ಶಂಕರ ಪಾಟೀಲ ಮುನೇನಕೊಪ್ಪ ಅವರ ಫೋಟೋ ಬಳಸುತ್ತಿದ್ದ ದೇವರಾಜ ಇದೀಗ ದಿಡೀರನೇ ಕೇಂದ್ರ ಸಚಿವ ಪ್ರಲ್ಲಾದ ಜೋಶಿಯವರ ಭಾವಚಿತ್ರ ಬಳಸುತ್ತಿದ್ದು, ಏನು ಮತ್ತು ಯಾವ ಸಂದೇಶ ಹೊತ್ತು ಬಂದಿದ್ದಾರೆ ಅನ್ನೋದು ಚರ್ಚೆಗೆ ಗ್ರಾಸವಾಗಿದೆ.
ಶಂಕರ ಪಾಟೀಲ ಮುನೇನಕೊಪ್ಪ ಅಭಿಮಾನಿ ಬಳಗದ ಹೆಸರಿನಲ್ಲಿ ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದ ದೇವರಾಜ, ಇದೀಗ ಮುನೇನಕೊಪ್ಪ ಅವರ ಪೋಟೋ ಬದಲು, ಕೇಂದ್ರ ಸಚಿವರ ಫೋಟೋದ ಜೊತೆಗೆ ಫೀಲ್ಡಿಗೆ ಇಳಿದಿರುವದು ಹಲವು ಸಂಶಯಗಳಿಗೆ ಎಡೆಮಾಡಿದೆ.
ದೇವರಾಜ ದಾಡಿಬಾವಿ ನವಲಗುಂದ ಕ್ಷೇತ್ರದಲ್ಲಿ ಓಡಾಡುತ್ತಿದ್ದು, ಶಂಕರ ಪಾಟೀಲರ ಪರ ಪಕ್ಷ ಸಂಘಟನೆ ಮಾಡುತ್ತಿದ್ದಾರಾ ಅಥವಾ ಒಂದು ಕೈ ನೋಡೋಣ ಅಂತ ನಿರ್ಧರಿಸಿದ್ದಾರಾ ಅನ್ನೋದು ಗೊತ್ತಾಗಬೇಕಿದೆ.
