ಕಾರ್ಮಿಕ ಕಾರ್ಡಗಳ ನೈಜತೆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ತಿಳಿಸಿದ್ದಾರೆ. ಇದರಿಂದ ಅರ್ಹ ಫಲಾನುಭವಿಗಳಿಗೆ ಯಾವದೇ ಸಮಸ್ಯೆಯಾಗಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸರ್ಕಾರದ ಯೋಜನೆಗಳ ಲಾಭ ಪಡೆಯಲು ಕಳೆದ ಮೂರು ವರ್ಷದ ಅವಧಿಯಲ್ಲಿ 39 ಲಕ್ಷ ಕಾರ್ಮಿಕರು ನೊಂದಣಿ ಮಾಡಿಸಿಕೊಂಡಿದ್ದು ಹಾವೇರಿ ಜಿಲ್ಲೆಯೊಂದರಲ್ಲಿಯೇ 2 ಲಕ್ಷ 60 ಸಾವಿರ ಜನ ಕಾರ್ಮಿಕ ಕಾರ್ಡ ಹೊಂದಿದ್ದಾರೆ ಎಂದು ಸಚಿವ ಲಾಡ್ ತಿಳಿಸಿದ್ದಾರೆ. ಆ ಕಾರಣಕ್ಕಾಗಿಯೇ ಪರಿಶೀಲನೆ ನಡೆಸಲಾಗುತ್ತಿದ್ದು, ವೇತನ ಪಾವತಿ ಚೀಟಿ ಕಡ್ಡಾಯವಾಗಿ ಕೊಟ್ಟವರಿಗೆ ಕಾರ್ಮಿಕ ಕಾರ್ಡ ಕೊಡಲಾಗುವದೆಂದು ಕಾರ್ಮಿಕ ಸಚಿವ ಸಂತೋಷ ಲಾಡ ತಿಳಿಸಿದ್ದಾರೆ.
