ಗ್ಯಾಸ್ ಸಿಲೆಂಡರ್ ತುಂಬಿದ ಲಾರಿಯೊ೦ದು ಧಾರವಾಡದ ಹೊಲಿಯದ ಹೈಕೊಲ್ ಬಳಿಯ ಅಂಡರ್ ಪಾಸ್ ಸೇತುವೆ ಕೆಳಗೆ ಸಿಲುಕಿರುವ ಘಟನೆ ನಡೆದಿದೆ. ಪರಿಣಾಮ ಗ್ಯಾಸ್ ಸಿಲೆಂಡರ್ ಲಾರಿಯಿಂದ ಅನೀಲ್ ಸೋರಿಕೆಯಾಗುತ್ತಿದೆ. ಮೊನ್ನೆಚ್ಚರಿಕೆ ಕ್ರಮವಾಗಿ ಧಾರವಾಡ ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕ ತಡೆ ಹಿಡಿದಿದ್ದಾರೆ.
ಸದ್ಯ ನಾಲ್ಕು ಕಿಲೋಮೀಟರ್ ನಷ್ಟು ರಸ್ತೆ ಸಂಪೂರ್ಣ ಬಂದ್ ಆಗಿದೆ. ಗ್ಯಾಸ್ ಲೀಕ್ ಸಂಪೂರ್ಣ ಹತೋಟಿಗೆ ಬರುವವರೆಗೆ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಬೇರೆ ಮಾರ್ಗವಾಗಿ ಸಂಚಾರಕ್ಕೆ ಒದಗಿಸಲಾಗಿದೆ.
ಸ್ಥಳದಲ್ಲಿ ಅಗ್ನಿಶಾಮಕ ದಳ ಸೇರಿದಂತೆ ಧಾರವಾಡ ಗ್ರಾಮೀಣ ಹಾಗೂ ಗರಗ ಪೊಲೀಸರು ದೌಡಾಯಿಸಿದ್ದಾರೆ.
