ಗತ್ತು ಗೈರತ್ತು ಇಲ್ಲದೆ ಅಂದುಕೊಂಡ ಕೆಲಸವನ್ನು ಮಾಡಿ ಮುಗಿಸುವ ಹುಲಕೋಟಿ ಗೌಡರು ಚಾಣಾಕ್ಷ ರಾಜಕಾರಣಿ. ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಗೆ 138 ಕೋಟಿ ಅನುದಾನ ಬಿಡುಗಡೆ ಮಾಡಿಸುವಲ್ಲಿ ಕಾನೂನು ಸಚಿವ ಎಚ್ ಕೆ ಪಾಟೀಲ್ ಯಶಸ್ವಿಯಾಗಿದ್ದಾರೆ.
ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಿಕೊಳ್ಳಬೇಕಾಗಿರುವದರಿಂದ ಈ ಸಲ ಯಾವದೇ ಕಾರ್ಯಕ್ರಮಕ್ಕೆ ಅನುದಾನ ಸಿಗುವದು ಅನುಮಾನ ಎಂಬಂತಹ ಪರಿಸ್ಥಿತಿಯಲ್ಲಿ 138 ಕೋಟಿ ಅನುದಾನ ಬಿಡುಗಡೆ ಮಾಡಿಸಿ ಸೈ ಎಣಿಸಿಕೊಂಡಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದ ಒಪ್ಪಿಗೆ ಸಿಕ್ಕಿದ ಪರಿಣಾಮ, ಅಭಿವೃದ್ಧಿಯಿಂದ ದೂರ ಉಳಿದಿದ್ದ ಗದಗ ಜಿಲ್ಲೆಯ ಬಡರೋಗಿಗಳಿಗೆ ವರದಾನವಾಗಲಿದೆ.