Download Our App

Follow us

Home » ಆರೋಗ್ಯ » 89 ವಯಸ್ಸಿನ ಸಾಕಾನೆ ಬಿಜುಲಿ ಪ್ರಸಾದ ಇನ್ನಿಲ್ಲ

89 ವಯಸ್ಸಿನ ಸಾಕಾನೆ ಬಿಜುಲಿ ಪ್ರಸಾದ ಇನ್ನಿಲ್ಲ

ದೇಶದ ಅತ್ಯಂತ ಹಿರಿಯ ಸಾಕಾನೆ ಎಂದೇ ಹೆಸರಾಗಿದ್ದ ಬಿಜುಲಿ ಪ್ರಸಾದ ವಯೋ ಸಹಜ ಕಾಯಿಲೆಯಿಂದ ಮೃತಪಟ್ಟಿದೆ. ಮೂಲಗಳ ಪ್ರಕಾರ ಬ್ರಿಟಿಷ್ ವಸಾಹತು ಶಾಹಿಯ ಸಾಕ್ಷಿಯನ್ನು ಹೊತ್ತ ಆನೆಯು ಅಸ್ಸಾಂನ ಬಿಹಾಲಿ ಟೀ ಎಸ್ಟೇಟ್ ನಲ್ಲಿತ್ತು. ಬಿಜುಲಿ ಪ್ರಸಾದ ಒಂದು ಕಾಲದಲ್ಲಿ ಬ್ರಿಟಿಷರ ರಾಜ ಅತಿಥಿಯಾಗಿತ್ತು. 82 ವರ್ಷಗಳ ಹಿಂದೆ ವಿಲಿಯಮ್ಸನ್ ಮೇಗಾರ ಟೀ ಕಂಪನಿಯು ಈ ಆನೆಯನ್ನು ಖರೀದಿಸಿತ್ತು. ಬಿಜುಲಿ ಪ್ರಸಾದ ನಿಧನಕ್ಕೆ ನಿಸರ್ಗ ಪ್ರೇಮಿಗಳು ಸಂತಾಪ ಸೂಚಿಸಿದ್ದಾರೆ. ಭಾರತದ ಅತ್ಯಂತ ಹಳೆಯ ಆನೆ ಕಾಜಿರಂಗದಲ್ಲಿ ಎರಡನೇ ಆನೆ ಮಹಿಸೂರನಲ್ಲಿತ್ತು. ಇವೆರಡು ಆನೆಗಳು ಸಾವನ್ನಪ್ಪಿದ ಬಳಿಕ ಬಿಜುಲಿ ಪ್ರಸಾದ ಆನೆ ದೇಶದ ಅತ್ಯಂತ ಹಿರಿಯ ಆನೆಯಾಗಿತ್ತು. ಬ್ರಿಟಿಷರು ಈ ಆನೆಗೆ ಬಿಜುಲಿ ಪ್ರಸಾದ ಅಂತ ನಾಮಕರಣ ಮಾಡಿದ್ದರು.

Karnataka Files
Author: Karnataka Files

Leave a Comment

RELATED LATEST NEWS

Top Headlines

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾಗಿ ರುದ್ರೇಶ್ ಘಾಳಿ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾಗಿ, ರುದ್ರೇಶ ಘಾಳಿಯವರನ್ನು ನೇಮಕ ಮಾಡಲಾಗಿದೆ.  ಪಾಲಿಕೆ ಆಯುಕ್ತರಾಗಿದ್ದ ಡಾ. ಈಶ್ವರ ಉಳ್ಳಾಗಡ್ಡಿಯವರನ್ನು ಬೆಳಗಾವಿ ಮಹಾನಗರ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಹುದ್ದೆಗೆ

Live Cricket

error: Content is protected !!