ದೇವರು ವರನು ಕೊಡಲ್ಲ, ಶಾಪನು ಕೊಡಲ್ಲ, ಕೇವಲ ಅವಕಾಶ ಕೊಡ್ತಾನೆ. ಸಿಕ್ಕ ಅವಕಾಶ ಸದುಪಯೋಗ ಮಾಡಿಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಹೇಳಿದ್ದಾರೆ.
ಡಿ ಕೆ ಶಿವಕುಮಾರ ಇಂದು ನೊಣವಿನಕೆರೆ ಕರವಗಲ್ ಆಂಜನೇಯಸ್ವಾಮಿ ದೇಗುಲದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ತುಂಬಾ ಕಡೆಗೆ ಆಂಜನೇಯನ ದೇಗುಲಗಳು ಇವೆ. ಆಂಜನೇಯ ರಾಮನ ಪರಮ ಭಕ್ತನಾಗಿದ್ದರಿಂದ ಆಂಜನೇಯನನ್ನು ಪೂಜಿಸಲಾಗುತ್ತದೆ. ಆಂಜನೇಯ ರಾಮನ ಸೇವೆಯನ್ನು ಮಾಡಿದರು ಆಂಜನೇಯ ನಮ್ಮೆಲ್ಲರಿಗೂ ಸೇವೆಯ ಪ್ರತೀಕ ಎಂದು ಡಿ ಕೆ ಶಿವಕುಮಾರ ಅವರು ನಡೆಸಿದರು. ಕಾರ್ಯಕ್ರಮದಲ್ಲಿ ನೊಣವಿನಕೆರೆ ಕಾಡಸಿದ್ದೇಶ್ವರ ಮಠಾಧಿಪತಿಗಳಾದ ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಸ್ವಾಮೀಜಿ ಸೇರಿದಂತೆ ಅನೇಕ ಶಾಸಕರು ಇದ್ದರು.