ರಾಜ್ಯ ಸರ್ಕಾರದ ಕಾರ್ಯವೈಖರಿಗೆ ಅಸಮಾಧಾನಗೊಂಡು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದ ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಕಾಂಗ್ರೇಸ್ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಧಾರವಾಡದ ಮಮತಾ ಫಾರ್ಮಹೌಸ್ ನಲ್ಲಿ ಮಾತನಾಡಿದ ಅವರು ನಾನು ಕಟ್ಟಾ ಕಾಂಗ್ರೇಸ್ಸಿಗ, ನನಗೆ ಬಿಜೆಪಿ ಸಿದ್ದಾಂತ ಆಗಿ ಬರಲ್ಲ. ಹೀಗಾಗಿ ಕಾಂಗ್ರೇಸ್ ಬಿಟ್ಟು ಹೋಗಲ್ಲ ಎಂದಿದ್ದಾರೆ. ಕಾಂಗ್ರೇಸ್, ಬಿಜೆಪಿ ಪಕ್ಷದವರು ಎಲ್ಲರನ್ನು ಕರೆಯುತ್ತಿರುತ್ತಾರೆ. ಹಾಗಂತ ಹೋಗೋಕೆ ಆಗಲ್ಲ ಎಂದು ಸ್ಪಷ್ಟಪಡಿಸಿದರು.
ನನಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಉತ್ತಮ ಒಡನಾಟ ಇದೆ. ನಾನು ನೋಡಿದ ಹಾಗೇ ಇತ್ತೀಚಿನ ದಿನಗಳಲ್ಲಿ ಸಿದ್ದರಾಮಯ್ಯ ರಾಜ್ಯ ಕಂಡ ಬೆಸ್ಟ್ ಚೀಫ್ ಮಿನಿಸ್ಟರ್ ಎಂದು ಕೊಂಡಾಡಿದರು.