ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಟಾಪನೆ ವಿಷಯ ಇದೀಗ ಬೀದಿಗೆ ಬಿದ್ದಿದೆ. ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಟಾಪನೆಗೆ ಆಗ್ರಹಿಸಿ ಬಿಜೆಪಿ ಪಾಲಿಕೆ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿದರೆ, ಮತ್ತೊಂದೆಡೆ ವಿವಿಧ ದಲಿತ ಒಕ್ಕೂಟಗಳು ಗಣೇಶ ಪ್ರತಿಷ್ಟಾಪನೆಗೆ ಅವಕಾಶ ನೀಡದಂತೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದವು.
ಗಣೇಶ ಪ್ರತಿಷ್ಟಾಪನೆ ವಿಷಯವಾಗಿ ಬಿಜೆಪಿ ಸಾಮಾಜಿಕ ಸ್ವಾಸ್ಥ ಹಾಳು ಮಾಡುತ್ತಿದೆ ಎಂದು ಆರೋಪಿಸಿರುವ ದಲಿತ ನಾಯಕರು, ಯಾವದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು. ಮುಖಂಡರಾದ ಗುರುನಾಥ ಉಳ್ಳಿಕಾಶಿ, ಚೇತನ ಹಿರೇಕೆರೂರ, ಪರಶುರಾಮ ಕಾಳೆ ಸೇರಿದಂತೆ ಅನೇಕ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.