ಗಣೇಶ ಚತುರ್ಥಿ ಮಹಾರಾಷ್ಟ್ರದ ಜನಪ್ರಿಯ ಹಬ್ಬಗಳಲ್ಲಿ ಒಂದು. ಗಣೇಶ ಹಬ್ಬ ಬಂತೆಂದರೆ ಸಾಕು. ವಿಶೇಷವಾಗಿ ಮುಂಬೈ ಮಹಾನಗರ ಮಧುವಣಗಿತ್ತಿಯಂತೆ ಶೃಂಗಾರಗೊಳ್ಳುತ್ತದೆ.
ಮುಂಬೈನಲ್ಲಿ ದೇಶದ ಅತೀ ಶ್ರೀಮಂತ ಗಣಪನನ್ನು ಪ್ರತಿಷ್ಟಾಪಿಸಲಾಗುತ್ತದೆ. ಮುಂಬೈನ ಕಿಂಗ್ಸ್ ಸರ್ಕಲ್ ನಲ್ಲಿ GSB ಸೇವಾ ಮಂಡಲದವರು ಪ್ರತಿಷ್ಟಾಪಿಸುವ ಗಣಪ ದೇಶದಲ್ಲಿಯೇ ಶ್ರೀಮಂತ. ಈ ವರ್ಷ ಈ ಗಣಪನಿಗೆ 69 ಕೆಜಿ ಚಿನ್ನ, 336 ಕೆಜಿ ಬೆಳ್ಳಿಯಿಂದ ಅಲಂಕರಿಸಲಾಗಿದೆ.
ಈ ಶ್ರೀಮಂತ ಗಣಪನಿಗೆ ವಿಮೆ ಮಾಡಿಸಲಾಗಿದೆ. The new india insurance ಕಂಪನಿಯಲ್ಲಿ ಈ ಗಣಪನ ಮೇಲೆ 360 ಕೋಟಿ 40 ಲಕ್ಷ ವಿಮೆ ( insurance ) ಮಾಡಿಸಲಾಗಿದೆ.