ಬಿಜೆಪಿ ಟಿಕೇಟ್ ಕೊಡಿಸುವದಾಗಿ ಹೇಳಿ ಗೋವಿಂದ ಪೂಜಾರಿಗೆ 5 ಕೋಟಿ ಪಂಗನಾಮ ಹಾಕಿದ ಪ್ರಕರಣ, ರಾಜ್ಯದಲ್ಲಿ ಸದ್ದು ಮಾಡಿದೆ. ಡೀಲ್ ಪ್ರಕರಣದಲ್ಲಿ ಬಂಧನಕ್ಕೊಳಗಾದ ಚೈತ್ರಾ ಕುಂದಾಪುರ ಪೊಲೀಸ್ ಕಸ್ಟಡಿ ನಾಳೆ ಮುಗಿಯಲಿದೆ. ವಂಚನೆ ಮಾಡಿದ ಆರೋಪದ ಮೇಲೆ ಹಾಲಶ್ರೀಯನ್ನು ಈಗಾಗಲೇ ಬಂಧಿಸಲಾಗಿದ್ದು, ತನಿಖೆ ತೀವ್ರಗತಿಯಲ್ಲಿ ನಡೆದಿದೆ. ಹಾಲಶ್ರೀ ಹಾಗೂ ಚೈತ್ರಾ ಕುಂದಾಪುರ ಇಬ್ಬರನ್ನು ಮುಖಾಮುಖಿ ಕುಳ್ಳರಿಸಿ ವಿಚಾರಣೆ ನಡೆಸಿರುವ ಸಿ ಸಿ ಬಿ ಅಧಿಕಾರಿಗಳು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ ಎನ್ನಲಾಗಿದೆ.
ಗೋವಿಂದ ಪೂಜಾರಿಯಿಂದ ಹಣ ಪಡೆದಿದ್ದನ್ನು ಚೈತ್ರಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಚೈತ್ರಾಳಿಂದ ಸಿ ಸಿ ಬಿ ಪೊಲೀಸರು ಎರಡು ಕೋಟಿಗೂ ಹೆಚ್ಚು ಬಾಳುವ ಆಸ್ತಿ ಮತ್ತು ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಹಾಲಶ್ರೀಯನ್ನು ಮೊನ್ನೆ ಮಜಹರು ಮಾಡಲು ಮಠಕ್ಕೆ ಕರೆದೋಯ್ದ ಸಂದರ್ಭದಲ್ಲಿ, ಮಠದಲ್ಲಿದ್ದ 56 ಲಕ್ಷ ಹಣವನ್ನು ವಶಕ್ಕೆ ಪಡೆದಿದ್ದಾರೆ.
ನಾಳೆ ಚೈತ್ರಾ ಕುಂದಾಪುರ ಪೊಲೀಸ ಕಸ್ಟಡಿ ಮುಕ್ತಾಯ ಗೊಳ್ಳಲಿದ್ದು, ಈಗಾಗಲೇ ಚೈತ್ರಾ ಹಲವು ವಿಚಾರವನ್ನು ಸಿ ಸಿ ಬಿ ಅಧಿಕಾರಿಗಳ ಮುಂದೆ ಹೇಳಿದ್ದಾರೆ. ಚೈತ್ರಾ ಕುಂದಾಪುರ ವಿಚಾರಣೆ ತೀವ್ರಗೊಳಿಸಲಾಗಿದೆ.